ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಪಡೆಯಲು ಅನುಕೂಲವಾಗುವಂತೆ ಅಂಚೆ ಕಚೇರಿಯಲ್ಲಿ ಜನಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಪಾನ್ ಕಾರ್ಡ್, ಪಾsಸ್‌ಪೋರ್ಟ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ, ಜನನ ಮತ್ತು ಮರಣ ಪ್ರಮಾಣಪತ್ರ, ಆಯುಷ್ಮಾನ್ ಭಾರತ ಯೋಜನೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ, ರಾಷ್ಟ್ರೀಯ ಪಿಂಚಣಿ ಯೋಜನೆ, ವಿಮಾನ ಟಿಕೆಟ್, ಬಸ್ ಟಿಕೆಟ್, ಮೊಬೈಲ್ ಮತ್ತು ಡಿಟಿಎಚ್ ಬಿಲ್ ಪಾವತಿ, ಜೀವ ವಿಮೆ ಕಂತು ಪಾವತಿ, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಸೇರಿದಂತೆ ೭೩ ಸೌಲಭ್ಯಗಳನ್ನು ಪಡೆಯಬಹುದು.
ದೇಶದಾದ್ಯಂತದ 10 ಸಾವಿರ ಅಂಚೆ ಕಚೇರಿಯಲ್ಲಿ ಸೇವೆ ಲಭ್ಯವಿದ್ದು, ರಾಜ್ಯದ ಉತ್ತರ ಕರ್ನಾಟಕದಲ್ಲಿ 345, ದಕ್ಷಿಣ ಕರ್ನಾಟಕದಲ್ಲಿ 386, ಬೆಂಗಳೂರು ವಲಯದಲ್ಲಿ 120 ಅಂಚೆ ಕಚೇರಿಯಲ್ಲಿ ಜನಸೇವಾ ಕೇಂದ್ರ ಆರಂಭಿಸಲಾಗಿದೆ ಎಂದು ಕರ್ನಾಟಕ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ತಿಳಿಸಿದರು.
Courtesyg: Google (photo)