ಜಿಎಸ್‌ಟಿಯಿಂದ ಸಣ್ಣ ವಿತರಕರಿಗಿಲ್ಲ ಸಮಸ್ಯೆ

ಪಾವತಿ ಮಾಡಬೇಕಿರುವ ಸರಕು ಮತ್ತು ಸೇವಾ ತೆರಿಗೆ ಮೊತ್ತದಲ್ಲಿ ಶೇ.೧ರಷ್ಟು ಕಡ್ಡಾಯವಾಗಿ ನಗದು ರೂಪದಲ್ಲಿ ಇರಬೇಕು ಎಂಬ ನಿಯಮವು ಸಣ್ಣ ಉದ್ದಿಮೆಗಳು ಮತ್ತು ಸಣ್ಣ ವಿತರಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ತಿಂಗಳಿಗೆ 50 ಲಕ್ಷ ರೂ. ಅಥವಾ ವಾರ್ಷಿಕ ೬ ಕೋಟಿ ರೂ. ವಹಿವಾಟು ನಡೆಸುವ ಕಂಪನಿಗಳಿಗೆ ಮಾತ್ರವೇ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದು ಹೇಳಿವೆ. ನಕಲಿ ಇನ್‌ವಾಯ್ಸ್ ಸೃಷ್ಟಿಸಿ ತೆರಿಗೆ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ನೇರ ತೆರಿಗೆ ಮತ್ತು ಕಸ್ಟಮ್ಸ್ನ ಕೇಂದ್ರೀಯ ಮಂಡಳಿಯು ಈ ನಿಯಮವನ್ನು ರೂಪಿಸಿದೆ. ಜನವರಿ 1ರಿಂದ ಜಿಎಸ್‌ಟಿ ಪಾವತಿಸಲು, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಕೆಯು ಶೇ.99ಕ್ಕೆ ಮಿತಿಗೊಳ್ಳಲಿದೆ.

ಕಂಪನಿಯ ವ್ಯವಸ್ಥಾಪಕ ನಿರ್ದೇ ಶಕ ಅಥವಾ ಪಾಲುದಾರ 1 ಲಕ್ಷ ರೂ.ಗಿಂತ ಅಧಿಕ ಆದಾಯ ತೆರಿಗೆ ಪಾವತಿಸಿದಲ್ಲಿ ಅಥವಾ 1 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಮರುಪಾವತಿ ಪಡೆದಲ್ಲಿ ಹೊಸ ನಿಯಮ ಅನ್ವಯಿಸುವುದಿಲ್ಲ. ಅದೇ ರೀತಿ ಸರ್ಕಾರಿ ಇಲಾಖೆಗಳು, ಪಿಎಸ್‌ಯುಗಳು ಹಾಗೂ ಸ್ಥಳೀಯ ಆಡಳಿತಗಳಿಗೆ ಸಹ ಅನ್ವಯ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top