ಜಿಎಸ್‌ಟಿ ಅಡಕತ್ತರಿಯಲ್ಲಿ ಸಿಲುಕಿರುವ ರಾಜ್ಯದ 1.75 ಲಕ್ಷಕ್ಕೂ ಹೆಚ್ಚಿನ ಉದ್ದಿಮೆಗಳು ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿವೆ. ರಾಜ್ಯದಲ್ಲಿ 8.88 ಲಕ್ಷ ಉದ್ಯಮಗಳು ಜಿಎಸ್‌ಟಿಯಡಿ ನೋಂದಣಿ ಮಾಡಿಸಿಕೊಂಡಿವೆ. ಇವುಗಳಲ್ಲಿ ಶೇ.78ರಷ್ಟು ಉದ್ದಿಮೆಗಳು ಅಕ್ಟೋಬರ್ ಅಂತ್ಯದಲ್ಲಿ ಜಿಎಸ್‌ಟಿ ವಿವರ ಸಲ್ಲಿಸಿವೆ. ಲಾಕ್‌ಡೌನ್ ವೇಳೆಯಲ್ಲಿ ಬಾಗಿಲು ಮುಚ್ಚಿದ್ದರಿಂದ ದೇಶದ ಲಕ್ಷಾಂತರ ಉದ್ದಿಮೆಗಳಿಗೆ ಜಿಎಸ್‌ಟಿ ಆರ್-೩ಬಿ ಶೂನ್ಯ ತೆರಿಗೆ ವಿವರ ಸಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಯಾವುದೇ ಆದಾಯ ಇಲ್ಲದ್ದರಿಂದ ವಿಳಂಬ ಶುಲ್ಕ ಪಾವತಿ ಕೂಡ ಮಾಡಿಲ್ಲ. ವಿಳಂಬ ಶುಲ್ಕವನ್ನು ಮನ್ನಾ ಮಾಡುವಂತೆ ಸರ್ಕಾರವನ್ನು ಕೋರಿವೆ.
ಶೂನ್ಯ ಜಿಎಸ್‌ಟಿ ತೆರಿಗೆ ವಿವರವಲ್ಲದೆ, ವಿವರ ಸಲ್ಲಿಕೆ ವಿಳಂಬಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕು. ನ.30ರೊಳಗೆ ಜಿಎಸ್‌ಟಿಆರ್-3ಬಿ ವಿವರ ಸಲ್ಲಿಸದಿದ್ದರ ನೋಂದÀಣಿ ರದ್ದಾಗಲಿದೆ ಎಂದು ಸರ್ಕಾರ ಎಚ್ಚರಿಸಿದೆ. ಜಿಎಸ್‌ಟಿ ನೋಂದಣಿ ರದ್ದಾದರೆ ಇ-ವೇಬಿಲ್ ಸಿಗುವುದಿಲ್ಲ. ಆಗ ವಹಿವಾಟು ನಡೆಸಲು ಆಗುವುದಿಲ್ಲ ಎನ್ನುವುದು ಉದ್ಯಮದ ಅಳಲು.ಶೇ.೭೪ರಷ್ಟು ಉದ್ದಿಮೆಗಳು ಅಕ್ಟೋಬರ್‌ನ ಜಿಎಸ್‌ಟಿ ವಿವರ ಸಲ್ಲಿಸಿವೆ. ವಿಳಂಬ ಶುಲ್ಕವನ್ನು ಮನ್ನಾ ತೀರ್ಮಾನ ಜಿಎಸ್‌ಟಿ ಮಂಡಳಿ ಮಾತ್ರ ತೆಗೆದುಕೊಳ್ಳಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.
Courtesyg: Google (photo)