ಜಿಎಸ್‌ಟಿ ಜಾಲತಾಣದಲ್ಲಿ ಏಕಕಾಲಕ್ಕೆ 3 ಲಕ್ಷ ತೆರಿಗೆದಾರರು ಲಾಗಿನ್ ಆಗಬಹುದು ಎಂದು ಜಿಎಸ್‌ಟಿ ಜಾಲತಾಣ ಭಾನುವಾರ ತಿಳಿಸಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಪರೋಕ್ಷ ತೆರಿಗೆಗೆ ಸಂಬಂಧಿಸಿದ ಚುಟವಟಿಕೆಗಳಲ್ಲಿ ಗಣನೀಯ ಹೆಚ್ಚಳ ಆಗುತ್ತಿದೆ. ಹೀಗಾಗಿ ಜಾಲತಾಣದ ಸಾಮರ್ಥ್ಯವನ್ನು 1.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಿಎಸ್‌ಟಿಆರ್–3ಬಿಯ ಪಿಡಿಎಫ್ ನಮೂನೆ ನ.12ರಿಂದ ಜಾಲತಾಣದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದೆ.
Courtesyg: Google (photo)