ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಒಮ್ಮತದ ತೀರ್ಮಾನ ಸಾಧ್ಯವಾಗಿಲ್ಲ. ಪರಿಹಾರ ನೀಡುವಲ್ಲಿ ಸಮಸ್ಯೆ ಮತ್ತು ಸಂಪೂರ್ಣ ಮೊತ್ತ ಪಾವತಿಸಬೇಕೆಂಬ 10 ಬಿಜೆಪಿಯೇತÀರ ಸರ್ಕಾರಗಳ ಒತ್ತಾಯ ಹಾಗೂ ಸುಂಕ ವಿನಾಯಿತಿಯನ್ನು 2022ರವರೆಗೆ ವಿಸ್ತರಿಸಲು ಕೇಂದ್ರ ಒಪ್ಪಿದರೂ, ರಾಜ್ಯಗಳು ಈ ಪ್ರಸ್ತಾವಕ್ಕೆ ಸಹಮತ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೧೨ಕ್ಕೆ ಮುಂದೂಡಲಾಗಿದೆ. ಆದರೆ, ಈ ವರ್ಷ ಸಂಗ್ರಹಿಸಿದ 20,000 ರೂ. ಕೋಟಿ ಮೊತ್ತವನ್ನು ವಿತರಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕರ್ನಾಟಕ, ಗೋವಾ ಮತ್ತು ಅಸ್ಸಾಂ ರಾಜ್ಯಗಳಿಗೆ ಸಾಲ ಎತ್ತಲು ಅನುಮತಿ ನೀಡಲಾಗಿದೆ. ಜಿಎಸ್‌ಟಿ ಅಂದಾಜು ಕೊರತೆ ೨.೩೫ ಲಕ್ಷ ಕೋಟಿ ರೂ. ರಾಜ್ಯಗಳಿಗೆ ಆದ ಕೋವಿಡೇತರ ನಷ್ಟ 97,೦೦೦ ಕೋಟಿ ರೂ. ಇದನ್ನು ರಾಜ್ಯಗಳಿಗೆ ವಿತರಿಸಲಾಗುತ್ತದೆ. ಕರ್ನಾಟಕಕ್ಕೆ 13,000 ಕೋಟಿ ರೂ. ಪರಿಹಾರ ನಿರೀಕ್ಷಿಸಲಾಗಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಚುನಾವಣೆ ನಡೆಯಲಿದ್ದು, ಈ ಮೂರು ರಾಜ್ಯಗಳು ಜಿಎಸ್‌ಟಿಯನ್ನು ಪ್ರಬಲವಾಗಿ ಪ್ರತಿರೋಧಿಸುತ್ತಿವೆ.
-Courtesyg: Google