ಅಕ್ಟೋಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ೧.೦೫ ಲಕ್ಷ ಕೋಟಿ ರೂ. ಆಗಿದ್ದು, ಫೆಬ್ರವರಿ ನಂತರದ ಅತಿ ಹೆಚ್ಚು ಮೊತ್ತ ಇದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎನ್ನುವ ಆಶಾಭಾವ ವ್ಯಕ್ತವಾಗಿದೆ. ಕೊರೊನಾ ವ್ಯಾಪಿಸುವಿಕೆ ತಡೆಗೆ ಮಾರ್ಚ್ ಕೊನೆ ವಾರದಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ, ಅಗತ್ಯ ಸೇವೆಗಳು, ಅಗತ್ಯ ವಸ್ತುಗಳ ಹೊರತಾಗಿ ಬೇರೆಲ್ಲ ಉತ್ಪನ್ನಗಳ ಪೂರೈಕರ-ಉತ್ಪಾದನೆ ಸ್ಥಗಿತಗೊಂಡಿತು. ಮಾರುಕಟ್ಟೆ ಬಹುತೇಕ ಮುಚ್ಚಿದ ಕಾರಣ, ಪರೋಕ್ಷ ತೆರಿಗೆ ಸಂಗ್ರಹ ಪಾತಾಳ ಮುಟ್ಟಿತು. ಗ್ರಾಹಕರು ಮನೆಯನ್ನೇ ಬಿಟ್ಟು ಹೊರಬಾರದ ಕಾರಣ, ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ ೩೨,೨೯೪ ಕೋಟಿ ರೂ.ಗೆ ಕುಸಿಯಿತು. ಏಪ್ರಿಲ್ ನಂತರ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿದರೂ, ವ್ಯಾಪಾರ- ವಹಿವಾಟು ವೇಗ ಪಡೆದುಕೊಂಡಿರಲಿಲ್ಲ. ಜನಜೀವನ ಮಾಮೂಲು ಸ್ಥಿತಿಗೆ ಬಂದಿರುವುದರಿAದ, ಸೇವಾ ಹಾಗೂ ತಯಾರಿಕಾ ವಲಯಕ್ಕೆ ಹಣ ನಿಧಾನವಾಗಿಯಾದರೂ ಹರಿದುಬರುತ್ತಿದೆ. ಹಣದ ಚಲಾವಣೆ ಹೆಚ್ಚಿದ್ದು, ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಕಾಣಿಸುತ್ತಿದೆ. ನಿರುದ್ಯೋಗ ಕೂಡ ಕಡಿಮೆಯಾಗುತ್ತಿದೆ. ಏಪ್ರಿಲ್‌ನಲ್ಲಿ ಶೇ.೨೩.೫೨ರಷ್ಟಿದ್ದ ನಿರುದ್ಯೋಗದ ಪ್ರಮಾಣ ಅಕ್ಟೋಬರ್‌ನಲ್ಲಿ ಶೇ.೬.೯೮ಕ್ಕೆ ಇಳಿದಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್‌ಇAಡಿಯನ್ ಎಕಾನಮಿ (ಸಿಎಂಐಇ)ಯ ಮಾಹಿತಿ ಹೇಳಿದೆ. ನಿರುದ್ಯೋಗದ ಪ್ರಮಾಣ ಸೆಪ್ಟೆಂಬರ್‌ನಲ್ಲಿ ಶೇ.೬.೬೭ ಇದ್ದಿತ್ತು. ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಸೆಪ್ಟೆಂಬರ್‌ನಲ್ಲಿ ನೀಡಿದ ಪ್ರಕಟಣೆ ಪ್ರಕಾರ, ವಾಣಿಜ್ಯೋದ್ಯಮಗಳ ವಿಶ್ವಾಸದ ಮಟ್ಟ ಹೆಚ್ಚಳಗೊಂಡಿದೆ. 2019-20 ರ ಮೊದಲ ತ್ರೈಮಾಸಿಕದಲ್ಲಿ 41ಕ್ಕೆ ಇಳಿದಿದ್ದ ಈ ಸೂಚ್ಯಂಕ ಎರಡನೆಯ ತ್ರೈಮಾಸಿಕದಲ್ಲಿ 50.3ಕ್ಕೆ ಹೆಚ್ಚಿದೆ. ಆರ್‌ಬಿಐ ತಾನು ನಡೆಸಿದ ಗ್ರಾಹಕರ ವಿಶ್ವಾಸದ ಸಮೀಕ್ಷೆಯ ವಿವರಗಳನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಶೇ.೯ರಷ್ಟು, ಇನ್ನಷ್ಟು ಬಿಗಡಾಯಿಸಿದೆ ಎಂದು ಶೇ.79.6 ಮಂದಿ ಹಾಗೂ ಮುಂದಿನ ಒಂದು ವರ್ಷದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಶೇ.50.1ರಷ್ಟು ಮಂದಿ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಇನ್ನಷ್ಟು ಕೆಡಲಿದೆ ಎಂದು ಹೇಳಿದವರ ಪ್ರಮಾಣ ಶೇ.34.8ರಷ್ಟು ಇತ್ತು.
Courtesyg: Google (photo)