ಜಿಯೊ ಮತ್ತು ಏರ್ಟೆಲ್ನ ಮಾರುಕಟ್ಟೆ ಪಾಲು ಹೆಚ್ಚುತ್ತಿದ್ದು, ವೊಡಾಫೋನ್ ಐಡಿಯಾದ ಆದಾಯ ಇಳಿಕೆ ಆಗುವ ಸಾಧ್ಯತೆ ಇದೆ. ಇದರಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಎರಡು ಕಂಪನಿಗಳು ಮಾತ್ರ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ವರದಿ ಹೇಳಿದೆ.
ಮುಂಬರುವ 12ರಿಂದ 18 ತಿಂಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಿಯೊ ಪ್ರವೇಶದ ನಂತರ ದೂರಸಂಪರ್ಕ ಉದ್ದಿಮೆ ವಲಯದಲ್ಲಿ ಆದ ಬದಲಾವಣೆಗಳಿಂದ ನಾಲ್ಕು ಕಂಪನಿಗಳು ಮಾತ್ರ ಉಳಿದುಕೊಳ್ಳುವ ಸ್ಥಿತಿ ಉಂಟಾಯಿತು. ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಏರ್ಟೆಲ್ ಆದಾಯದ ಪಾಲು ಶೇ.33 ಆಗಿತ್ತು. ಅದು ಮುಂದಿನ ಮೂರು ವರ್ಷಗಳಲ್ಲಿ ಶೇ.37 ಕ್ಕೆ ಹೆಚ್ಚಳವಾಗುವ ಅಂದಾಜಿದೆ. ಅದೇ ರೀತಿ ಜಿಯೊ ಆದಾಯದ ಪಾಲು ಶೇ38, ವೊಡಾಫೋನ್ ಐಡಿಯಾ ಶೇ.22 ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಶೇ.7ರಷ್ಟು ಪಾಲು ಹೊಂದಿತ್ತು ಎಂದು ಐಐಎಫ್ಎಲ್ ವರದಿ ಹೇಳಿದೆ.
Courtesyg: Google (photo)