ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು ಕಲಬೆರಕೆ ಜೇನು ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಬಹಿರಂಗಗೊAಡಿದೆ. ದೇಶದ ಮಾರುಕಟ್ಟೆಗಳಲ್ಲಿರುವ 13 ಬ್ರ್ಯಾಂಡ್‌ಗಳ ಜೇನನ್ನು ಸಿಎಸ್‌ಇ ಖರೀದಿಸಿ, ಗುಜರಾತ್‌ನ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಒಂದು ಬ್ರ‍್ಯಾಂಡ್ ಹೊರತುಪಡಿಸಿ ಉಳಿದವು ಶುದ್ಧವಾಗಿದೆ ಎಂಬ ವರದಿ ಬಂದಿತ್ತು. ಆದರೆ, ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಪರೀಕ್ಷೆಗೆ ಒಳಪಡಿಸಿದಾಗ 13ರಲ್ಲಿ 10 ಬ್ರ್ಯಾಂಡ್‌ಗಳ ಜೇನು ಅಶುದ್ಧ ಎಂದು ಗೊತ್ತಾಯಿತು. ಚೀನಾದಲ್ಲಿ ತಯಾರಾಗುವ ವಿಶೇಷ ರೀತಿಯ ಸಕ್ಕರೆ ಪಾಕವನ್ನು ಜೇನಿಗೆ ಕಲಬೆರಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಜೇನಿಗೆ ಶೇ.೮೦ರಷ್ಟು ಸಕ್ಕರೆ ಪಾಕ ಬೆರೆಸಿದರೂ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬಹುದು ಎಂದು ತಿಳಿದುಬಂದಿದೆ. ಜೇನಿನಲ್ಲಿ ಶೇ.25ರಿಂದ ಶೇ. 50ರಷ್ಟು ಸಕ್ಕರೆ ಪಾಕ ಇದ್ದರೂ ಶುದ್ಧ ಜೇನು ಎಂಬ ಫಲಿತಾಂಶ ಬಂದಿತ್ತು.
ಭಾರತದ ಆಹಾರ ಗುಣಮಟ್ಟ ಮಾನದಂಡಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಸಕ್ಕರೆ ಪಾಕ ಇದೆ ಎಂಬುದು ಖಚಿತ ಎಂದು ಸಿಎಸ್‌ಇ ಆಹಾರ ಸುರಕ್ಷತೆ ವಿಭಾಗದ ಕಾರ್ಯಕ್ರಮ ನಿರ್ದೇಶಕ ಅಮಿತ್ ಖುರಾನಾ ಹೇಳಿದ್ದಾರೆ. ಕಲಬೆರಕೆಯನ್ನು ಪತ್ತೆ ಮಾಡಲು ಸಾಧ್ಯವಿಲ್ಲದ ಸಕ್ಕರೆ ಪಾಕವನ್ನು ವಿನ್ಯಾಸ ಮಾಡಿದ್ದಾರೆ ಎನ್ನುತ್ತಾರೆ ಅವರು.
Courtesyg: Google (photo)