ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಬೆಲೆ ಜನವರಿ 1ರಿಂದ ಹೆಚ್ಚಲಿದೆ. ಕಚ್ಚಾ ವಸ್ತುಗಳು ಮತ್ತು ಇನ್ನಿತರ ವೆಚ್ಚಗಳಲ್ಲಿ ಆಗಿರುವ ಏರಿಕೆಯಿಂದ ತಯಾರಿಕೆ ವೆಚ್ಚದಲ್ಲಿ ಹೆಚ್ಚಳ ಆಗಿದೆ. ಕಂಪನಿ ತಯಾರಿಕೆ ವೆಚ್ಚದಲ್ಲಿ ಆದ ಹೆಚ್ಚಳವನ್ನು ತಾನೇ ಭರಿಸಿಕೊಳ್ಳುತ್ತಿತ್ತು. ಈಗ ಹೆಚ್ಚಳದ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವುದು ಅನಿವಾರ್ಯ ಎಂದು ಕಂಪನಿ ತಿಳಿಸಿದೆ.
Courtesyg: Google (photo)