ಟಾಟಾ ಮೋಟರ್ಸ್ನ ಜನಪ್ರಿಯ ಬ್ರ‍್ಯಾಂಡ್ ಸಫಾರಿ, ಮತ್ತೆ ಮಾರುಕಟ್ಟೆಗೆ ಬರಲಿದೆ. ಕಂಪನಿ ಸಿದ್ಧಪಡಿಸಿರುವ ಗ್ರಾವಿಟಾಸ್ ಎಂಬ ಎಸ್‌ಯುವಿಯನ್ನು ಸಫಾರಿ ಬ್ರ‍್ಯಾಂಡ್‌ನಲ್ಲಿ ಮಾರುಕಟ್ಟೆಗೆ ಬಿಡಲಿದೆ. ಸಫಾರಿ ಕಾರು ಎರಡು ದಶಕಗಳಿಗೂ ಹೆಚ್ಚು ಕಾಲ ಮಾರುಕಟ್ಟೆಯನ್ನು ಆಳಿತ್ತು. ಹೊಸ ಅವತಾರದಲ್ಲಿ ಸಫಾರಿಯ ಪರಂಪರೆ ಮುಮದುವರಿಯಲಿದೆ. ಬುಕಿಂಗ್ ಶೀಘ್ರವೇ ಆರಂಭ ಆಗಲಿದ್ದು, ಜನವರಿಯಲ್ಲೇ ಷೋರೂಂಗಳಲ್ಲಿ ಲಭ್ಯವಾಗಲಿದೆ. ಸಾಮಾಜಿಕವಾಗಿ ಸಕ್ರಿಯವಾಗಿರುವ ಹಾಗೂ ಮೋಜನ್ನು ಇಷ್ಟಪಡುವ ಗ್ರಾಹಕರಿಗೆ ಸಫಾರಿ ಇಷ್ಟವಾಗಲಿದೆ ಎಂದು ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.
Courtesyg: Google (photo)