ಫಿಯಟ್ ಕ್ರಿಸ್ಲರ್ ಆಟೊಮೊಬೈಲ್ಸ್ ಕಂಪನಿ ಹೈದರಾಬಾದ್‌ನಲ್ಲಿ ಜಾಗತಿಕ ಡಿಜಿಟಲ್ ಕೇಂದ್ರ ಸ್ಥಾಪನೆಗೆ 1,103 ಕೋಟಿ ರೂ.ಹೂಡಿಕೆ ಮಾಡಲಿದೆ. ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಈ ಕೇಂದ್ರವನ್ನು ಬಳಸಿಕೊಳ್ಳುವುದಾಗಿ ಕಂಪನಿ ಹೇಳಿದೆ.
ಉತ್ತರ ಅಮೆರಿಕದ ಹೊರಗಿನ ಅತಿ ದೊಡ್ಡ ಡಿಜಿಟಲ್ ಕೇಂದ್ರ ಇದಾಗಲಿದ್ದು, ಒಂದು ಸಾವಿರ ಉದ್ಯೋಗ ಸೃಷ್ಟಿಸಲಿದೆ. ಕಂಪನಿಯ ಜಾಗತಿಕ ತಂಡದ ಭಾಗವಾಗಿ ಹೈದರಾಬಾದ್‌ನ ಕೇಂದ್ರ ಕಾರ್ಯಾಚರಣೆ ನಡೆಸಲಿದ್ದು, ದೇಶದ ಅತ್ಯುತ್ತಮ ಡಿಜಿಟಲ್ ಪ್ರತಿಭೆಗಳನ್ನು ಆಕರ್ಷಿಸಲಿದೆ ಎಂದು ಎಫ್‌ಸಿಎ ಉತ್ತರ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ಸಿಐಒ ಮಮತಾ ಚಮರ್ತಿ ತಿಳಿಸಿದ್ದಾರೆ.
Courtesyg: Google (photo)