ಹತ್ತು ಪ್ರಮುಖ ಉದ್ಯಮಗಳಿಗೆ ಉತ್ಪಾದನೆ ಆಧರಿತ ಉತ್ತೇಜನೆ ಯೋಜನೆ(ಪಿಎಲ್‌ಐ)ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ದೂರಸಂಪರ್ಕ,ಆಟೊಮೊಬೈಲ್,ಔಷಧೋದ್ಯಮ ಸೇರಿದಂತೆ ಹತ್ತು ಪ್ರಮುಖ ತಯಾರಿಕಾ ಕ್ಷೇತ್ರಕ್ಕೆ ಪಿಎಲ್‌ಐ ಅಡಿ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ನೀಡಲಾಗುತ್ತದೆ. ಯೋಜನೆ ದೇಶಿ ಉತ್ಪಾದನೆಗೆ ಉತ್ತೇಜನ, ಆಮದು ಪ್ರಮಾಣ ಕಡಿಮೆಗೊಳಿಸಲು ಮತ್ತು ಉದ್ಯೋಗ ಸೃಷ್ಟಿಗೆ ಇದರಿಂದ ನೆರವಾಗಲಿದೆ. ಯೋಜನೆ ದೇಶದ ತಯಾರಿಕಾ ವಲಯವನ್ನು ಸ್ಪರ್ಧಾತ್ಮಕಗೊಳಿಸಲು ಸಹಾಯ ಮಾಡಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. ಯಾವ ವಲಯಕ್ಕೆ ಎಷ್ಟು ನೆರವು?: ಎಲೆಕ್ಟಾçನಿಕ್ಸ್ ಮತ್ತು ತಂತ್ರಜ್ಞಾನ ಉತ್ಪನ್ನ 5.000 ಕೋಟಿ ರೂ.,ಆಟೊಮೊಬೈಲ್ ಮತ್ತು ವಾಹನ ಬಿಡಿ ಭಾಗಗಳು 57,.42 ಕೋಟಿ ರೂ.,ಔಷಧೋದ್ಯಮ 15,000 ಕೋಟಿ ರೂ., ದೂರಸಂಪರ್ಕ ಮತ್ತು ನೆಟ್ವರ್ಕ್ ಸಂಬಂಧಿತ ಉತ್ಪನ್ನಗಳು 12,195 ಕೋಟಿ ರೂ., ಜವಳಿ ಉತ್ಪನ್ನಗಳು 10,683 ಕೋಟಿ ರೂ., ಆಹಾರ ಉತ್ಪನ್ನಗಳು 10,900 ಕೋಟಿ ರೂ., ಹೆಚ್ಚು ದಕ್ಷತೆಯ ಸೌರ ವಿದ್ಯುತ್ ಕೋಶಗಳು 5,500 ಕೋಟಿ ರೂ., ಮನೆಬಳಕೆಯ ದೊಡ್ಡ ಎಲೆಕ್ಟಾçನಿಕ್ ಉಪಕರಣಗಳು 6,238 ಕೋಟಿ ರೂ., ವಿಶೇಷ ಉಕ್ಕಿನ ಉತ್ಪನ್ನಗಳು 6,322ಕೋಟಿರೂ. ಹಾಗೂ ಸುಧಾರಿತ ಬ್ಯಾಟರಿ ಸೆಲ್ ವಲಯಕ್ಕೆ 18,100ಕೋಟಿರೂ.ಅನುದಾನ ನೀಡಲಾಗಿದೆ.
Courtesyg: Google (photo)