ತೈಲ ಬೆಲೆ ಸುಂಕ ೫ ರೂ.ಸುಂಕ ಏರಿಕೆ?

ಕೋವಿಡ್‌ನಿಂದ ಹಿನ್ನಡೆ ಅನುಭವಿಸಿರುವ ಆರ್ಥಿಕತೆಯನ್ನು ಸುಧಾರಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ೫ ರವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ೫ ರೂ. ಹೆಚ್ಚಳದಿಂದ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ  ೩೭.೯೮ ರೂ. ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ೩೬.೯೮ ರೂ.  ಆಗಲಿದೆ. ಮಾರ್ಚ್ ೨೦೨೦ರಲ್ಲಿ ಕೇಂದ್ರ ಸರ್ಕಾರ ೧೮ ಮತ್ತು ೧೨ ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿತು. ಅದರಲ್ಲಿ ಪೆಟ್ರೋಲ್ ಮೇಲೆ ೧೨ ಮತ್ತು ಡೀಸೆಲ್ ಮೇಲಿನ ಸುಂಕವನ್ನು ೯ರೂ.ಏರಿಕೆ ಮಾಡಿತ್ತು. ಪೆಟ್ರೋಲ್ ಮೇಲೆ ಇನ್ನೂ ೫ ಮತ್ತು ಡೀಸೆಲ್ ಮೇಲೆ ೩ ರೂ. ರಷ್ಟು ಸುಂಕವನ್ನು ಏರಿಕೆ ಮಾಡಲು ಅವಕಾಶವಿದೆ. ದೇಶÀದಲ್ಲಿ ಈಗ ಎರಡೂ ಇಂಧನಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ಸುಂಕದ ಪ್ರಮಾಣ ಶೇ. ೭೦ರಷ್ಟು ಇದ್ದು, ಇದು ಜಗತ್ತಿನಲ್ಲೇ ಅತ್ಯಧಿಕ. ಅರ್ಥ ವ್ಯವಸ್ಥೆಯ ಪುನಶ್ಚೇತನದ ಸ್ಥಿತಿ ಈಗಲೂ ನಾಜೂಕಾಗಿಯೇ ಇದೆ. ಅಬಕಾರಿ ಸುಂಕ ಹೆಚ್ಚಳ ಮಾಡದಿರಲು ಕೇಂದ್ರವು ಪ್ರಯತ್ನಿಸಬಹುದು. ಆದರೆ, ಕೋವಿಡ್‌ನಿಂದಾದ ನಷ್ಟ ಪರಿಹಾರಕ್ಕೆ ಇನ್ನೊಂದು ಪ್ಯಾಕೇಜ್ ನೀಡಲೇಬೇಕು ಎಂಬ ಸ್ಥಿತಿ ಇರುವುದರಿಂದ ಸುಂಕ ಹೆಚ್ಚಳ ಅನಿವಾರ್ಯವಾಗಿದೆ.

Courtesyg: Google (photo)

 

Journalist,Translator,avid bibliophile

Leave a Reply

Your email address will not be published. Required fields are marked *

Back To Top