ಸರಕುಗಳನ್ನು ಶೀಘ್ರವಾಗಿ ನಿಗದಿತ ಸ್ಥಳಕ್ಕೆ ತಲುಪಿಸಲು ತ್ವರಿತ ಸರಕು ಸಾಗಣೆ ನೀತಿಯನ್ನು ರೈಲ್ವೆ ಪರಿಚಯಿಸಿದೆ. ಸೋಮವಾರ ಮತ್ತು ಶುಕ್ರವಾರ ಸರಕುಗಳ ಸಾಗಣೆಗೆ ಆದ್ಯತೆ ನೀಡಲಾಗುತ್ತದೆ. ಎರಡೇ ದಿನದಲ್ಲಿ ಸರಕು ತಲುಪಿಸಿದರೆ ಹೆಚ್ಚು ಶುಲ್ಕ ತೆಗೆದುಕೊಳ್ಳಲಾಗುತ್ತದೆ.
ತ್ವರಿತಗತಿಯಲ್ಲಿ ಸರಕು ಸಾಗಣೆ ಮಾಡಬೇಕು ಎಂಬುವರು ಸಾಮಾನ್ಯ ದರಕ್ಕಿಂತ ಶೇ.5ರಷ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸಿದವರ ಸರಕುಗಳನ್ನು ಎರಡು ದಿನದ ನಂತರ ಸರಕು ಸಾಗಣೆ ಮಾಡಿದರೆ, ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ ಎಂದು ಹೇಳಿದೆ.
Courtesyg: Google (photo)