ನವದೆಹಲಿ, ಮಾರ್ಚ್ 30: ದೆಹಲಿಯಲ್ಲಿ ಏಕಾಏಕಿ ಹವಾಮಾನ ಬದಲಾವಣೆಗೊಂಡಿದ್ದು, ಧೂಳಿನ ಚಂಡಮಾರುತ ಆವರಿಸಿದೆ.
ಇದು 48 ಗಂಟೆಗಳ ಕಾಲ ಇರಲಿದ್ದು, ಯಾರೂ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದ ಹೊರಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಧೂಳಿನ ಕಣಗಳು ಶ್ವಾಸ ಕೋಶಕ್ಕೆ ಸೇರುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಧೂಳಿನ ಚಂಡಮಾರುತ ಆವರಿಸಿದ ತಕ್ಷಣ ಕತ್ತಲೆ ಆವರಿಸಿತ್ತು. ಗಾಳಿಯು ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಏನೇ ಆಗಲಿ ಸುಡು ಬಿಸಿಲಿಂದ ಸ್ವಲ್ಪ ಹೊತ್ತು ಬಿಡುವು ದೊರೆತಂತಾಯಿತು. ಮುಂಬರುವ ದಿನಗಳಲ್ಲಿ ದೆಹಲಿಯಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಏಪ್ರಿಲ್ 3 ರಿಂದ ಉಷ್ಣಾಂಶ ಹೆಚ್ಚಳ ಶುರುವಾಗಲಿದೆ. ಅಲ್ಲಿಯವರೆಗೆ ಗರಿಷ್ಠ ಉಷ್ಣಾಂಶ 36-38 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪ್ರಯಾಣಿಸುವ ಮೊದಲು ಹವಾಮಾನ ಪರಿಸ್ಥಿತಿಗಳನ್ನು ನೋಡಲು ಮೆಟ್ರೋ ಪ್ರಯಾಣಿಕರಿಗೆ ಪೊಲೀಸರು ಸೂಚಿಸಿದ್ದಾರೆ.