ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಫ್) ನಂದಿನಿ ಪಶು ಆಹಾರದ ದರವನ್ನು ಪ್ರತಿ ಟನ್ಗೆ 500 ರೂ. ಇಳಿಕೆ ಮಾಡಿದೆ. ಕೋವಿಡ್ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಮಂಡಳಿ ಕಳೆದ ಫೆಬ್ರವರಿಯಿಂದ ಮೇವರೆಗೆ ಪ್ರತಿ ಟನ್ ನಂದಿನಿ ಪಶು ಆಹಾರದ ಮೇಲೆ 500 ರೂ. ರಿಯಾಯಿತಿ ನೀಡಿತ್ತು. ನಾಲ್ಕು ತಿಂಗಳಲ್ಲಿ ಒಟ್ಟು 10 ರೂ. ಕೋಟಿ ರೂ ರಿಯಾಯಿತಿ ಭರಿಸಲಾಗಿದೆ. ಹೀಗಿದ್ದರೂ, ಪರಿಸ್ಥಿತಿ ಸುಧಾರಿಸದ ಕಾರಣ ಮಂಡಳಿ ನ.5 ರಿಂದ ಅನ್ವಯವಾಗುವಂತೆ ಪ್ರತಿ ಟನ್ಗೆ 500 ರೂ. ಬೆಲೆ ಇಳಿಕೆ ಮಾಡಿದೆ. ಕೊಡುಗೆ ಎರಡು ತಿಂಗಳು ಇರಲಿದೆ ಎಂದು ಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
. Courtesyg: Google (photo)