ಹೆಚ್ಚುತ್ತಿರುವ ಆನೆಗಳ ಸಂತತಿಗೆ ಕಡಿವಾಣ ಹಾಕಲು, ಬರ ಪರಿಸ್ಥಿತಿ ಹಿನ್ನೆಲೆಯಲಲಿ ಆಹಾರ ಕೊರತೆ ಮತ್ತು ಮಾನವರ ಜೊತೆ ಸಂಘರ್ಷ ಹೆಚ್ಚಳದ ಹಿನ್ನೆಲೆಯಲ್ಲಿ ನಮೀಬಿಯಾ ಸರ್ಕಾರ 170 ಆನೆಗಳ ಮಾರಾಟಕ್ಕೆ ಮುಂದಾಗಿದೆ. ಆಫ್ರಿಕದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ. ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಗುಂಡಿಕ್ಕಿ ಕೊಲ್ಲುವುದಕ್ಕೆ ಜನ/ಪರಿಸರ ಕರ‍್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆನೆಗಳ ಮಾರಾಟಕ್ಕೆ ಮುಂದಾಗಿದ್ದೇವೆ ಎಂದು ಪರಿಸರ ಸಚಿವ ಪೊಹಂಬಾ ಶಿಫಿಟಾ ತಿಳಿಸಿದ್ದಾರೆ.
Courtesyg: Google (photo)