ನಮ್ಮ ಮೆಟ್ರೊ 18ಕಿ.ಮೀ.ಉದ್ದದ ಎರಡು ಪ್ಯಾಕೇಜ್

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಹೊರವರ್ತುಲ ರಸ್ತೆಯ 18ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣ. ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್. ಪುರ ನಡುವಿನ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಎರಡು ಪ್ಯಾಕೇಜ್‌ಗಳಲ್ಲಿ 1 ಅಂದರೆ ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್ಎಸ್ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು ಮತ್ತು ಕಾಡುಬೀಸನಹಳ್ಳಿವರೆಗಿನ 9.8 ಕಿ.ಮೀ. ಮಾರ್ಗವನ್ನು ನಿರ್ಮಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ ಆರು ನಿಲ್ದಾಣಗಳ ನಿರ್ಮಾಣವೂ ಸೇರಿದ್ದು, ₹731 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಗುತ್ತಿಗೆಯು ಸಿಲ್ಕ್ ಬೋರ್ಡ್ ಬಳಿ ಬರುವ 2.84 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣವನ್ನೂ ಒಳಗೊಂಡಿದೆ. ಅದೇ ರೀತಿ, ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪನಿಯು ಪ್ಯಾಕೇಜ್- 2ರಲ್ಲಿ ಬರುವ ಮಾರತ್ತಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾಂಗಣ ಸಂಕೀರ್ಣ, ಸರಸ್ವತಿ ನಗರ ಮತ್ತು ಕೆ.ಆರ್. ಪುರ ನಿಲ್ದಾಣ ಸೇರಿದಂತೆ 9.77 ಕಿ.ಮೀ. ಉದ್ದದ ಮಾರ್ಗವನ್ನು ₹623 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡಲು ಮುಂದೆ ಬಂದಿದೆ. ಈ ಗುತ್ತಿಗೆ 1.09 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ ಡಿಪೊ ನಿರ್ಮಾಣವನ್ನೂ ಒಳಗೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

 

Courtesyg: Google (photo)

 

Journalist,Translator,avid bibliophile

Leave a Reply

Your email address will not be published. Required fields are marked *

Back To Top