ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಚಂಡಮಾರುತದ ಸಾಧ್ಯತೆ ಹೆಚ್ಚಿದೆ. ನ.೨೫ರ ಸಂಜೆ ತೀವ್ರ ಚಂಡಮಾರುತವು ಚೆನ್ನೈ ಮತ್ತು ಪುದುಚೇರಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು ಮತ್ತು ಪುದುಚೇರಿಯ ಹಲವೆಡೆ ಮಳೆಯಾಗಿದ್ದು, ಚೆನ್ನೈನಲ್ಲಿ ವರ್ಷಧಾರೆ ಸುರಿದಿದೆ. ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿರುವುದಲ್ಲದೆ, ತಮಿಳುನಾಡಿನ ಹಲವು ಜಲಾಶಯಗಳು ಭರ್ತಿಯಾಗಿವೆ. ಚಂಬರಕ್ಕಂ ಅಣೆಕಟ್ಟಿನ ಒಳಹರಿವು ಪರಿಶೀಲನೆಯಲ್ಲಿದೆ. ಚಂಡಮಾರುತದ ಜೊತೆಗೆ ಭಾರಿ ಗಾಳಿ ಬೀಸುವುದರಿಂದ, ಮರ ಮತ್ತು ವಿದ್ಯುತ್ ಕಂಬಗಳು ಉರುಳುವ, ವಿದ್ಯುತ್ ತಂತಿಗಳು ತುಂಡಾಗುವ ಸಾಧ್ಯತೆಯಿದೆ. ೧೩೦-೧೪೦ ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಸಮುದ್ರದಲ್ಲಿ ೨ ಮೀಟರ್‌ಎತ್ತರದ ಅಲೆಗಳು ಏಳಬಹುದು, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ೫೦ ಎಸ್‌ಡಿಆರ್‌ಎಫ್ ತಂಡಗಳು ಸನ್ನದ್ಧವಾಗಿದ್ದು, ಪುದುಚೇರಿ ಸರ್ಕಾರ ಮಂಗಳವಾರ ರಾತ್ರಿ 9ರಿಂದ ಗುರುವಾರ ಬೆಳಗ್ಗೆ 9ರವರೆಗೆ ನಿಷೇಧಾಜ್ಞೆ ಜಾರಿ ಮಾಡಿದೆ. ತಮಿಳುನಾಡಿನಲ್ಲಿ ಸಾರ್ವಜನಿಕರಜೆ ಘೋಷಿಸಲಾಗಿದೆ. ಕೇರಳ ಮತ್ತು ತಮಿಳುನಾಡಿನ ನಡುವಿನ 6 ವಿಶೇಷ ರೈಲು ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವೆ ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಗೊಳಿಸಲಾಗಿದೆ.
Courtesyg: Google (photo)