ರಕ್ಷಣಾ ವಲಯದ ಸರ್ಕಾರಿ ಸ್ವಾಮ್ಯದ ಉದ್ಯಮವಾದ ಗಾರ್ಡನ್‌ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್(ಜಿಆರ್‌ಎಸ್‌ಇ) ನೌಕಾಪಡೆಗೆ ಎಂಟನೇ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ(ಎಲ್‌ಸಿಯು) ನೌಕೆಯನ್ನು ಹಸ್ತಾಂತರಿಸಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪ ನೌಕೆಯನ್ನು ನಿಯೋಜಿಸಲಾಗಿದೆ. ಕರಾವಳಿ ತೀರದಲ್ಲೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವಂತೆ ಹಡಗನ್ನು ವಿನ್ಯಾಸಗೊಳಿಸಲಾಗಿದೆ ಎಂದು ಜಿಆರ್‌ಎಸ್‌ಇ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ವಿ.ಕೆ.ಸಕ್ಸೇನಾ ಹೇಳಿದರು.
ನೌಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಶೇ.90ರಷ್ಟು ಭಾಗಗಳು ಸ್ವದೇಶದಲ್ಲೇ ತಯಾರಾಗಿವೆ. ಯೋಧರ ಜೊತೆಗೆ ಯುದ್ಧ ಟ್ಯಾಂಕ್, ಸೇನಾ ವಾಹನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ತೀರದವರೆಗೆ ಬಂದು ಇಳಿಸುತ್ತವೆ. 216 ಮಂದಿಗೆ ಸ್ಥಳಾವಕಾಶವಿದ್ದು, ಲ್ಯಾಂಡಿಂಗ್ ವೇಳೆ ರಕ್ಷಣೆ ನೀಡಲು ಎರಡು ಸ್ವದೇಶಿ ಸಿಆರ್‌ಎನ್ 91 ಗನ್‌ಗಳನ್ನು ಹೊಂದಿದೆ.
Courtesyg: Google (photo)