ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 25 ಪೈಸೆ ಹೆಚ್ಚಿಸಿವೆ. ಇದರಿಂದ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದ ಹತ್ತಿರ ಬಂದಿದೆ. ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 83.97 ರೂ. ಡೀಸೆಲ್ 74.12 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 28 ಪೈಸೆ ಹೆಚ್ಚಾಗಿದ್ದು, ಲೀಟರ್ ಪೆಟ್ರೋಲ್ 86.79 ರೂ. ಹಾಗೂ ಡೀಸೆಲ್ 78.59 ರೂ. ತಲುಪಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 2018ರ ಅ.4 ರಂದು ಗರಿಷ್ಠ ಮಟ್ಟವಾದ ೮೪ ರೂ. ತಲುಪಿತ್ತು.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಆಲೋಚನೆ ಸರ್ಕಾರಕ್ಕಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಪೆಟ್ರೋಲ್/ಡೀಸೆಲ್ ಬೆಲೆಯನ್ನು ಪ್ರತಿದಿನ ಪರಿಷ್ಕರಿಸಬೇಕಿದೆ. ಆದರೆ, ಕೋವಿಡ್ ನಂತರದಲ್ಲಿ ಆ ರೀತಿ ಮಾಡುತ್ತಿಲ್ಲ. ಮೇ ೨೦೨೦ರ ಬಳಿಕ ಪ್ರತಿ ಲೀಟರ್ ಪೆಟ್ರೋಲ್ 14.28 ರೂ. ಹಾಗೂ ಡೀಸೆಲ್ ಬೆಲೆ 11.83 ರೂ. ಹೆಚ್ಚಳಗೊಂಡಿದೆ.
Courtesyg: Google (photo)