ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 23 ಪೈಸೆ ಹೆಚ್ಚಳಗೊಂಡಿದ್ದು, ಲೀಟರ್ಗೆ ದರ 84.20 ರೂ. ಮುಟ್ಟಿದೆ. ಡೀಸೆಲ್ ಬೆಲೆ 26 ಪೈಸೆ ಹೆಚ್ಚಳ ಆಗಿದ್ದು, ಲೀಟರ್ಗೆ 74.39 ರೂ.ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 90.83ರೂ. ಹಾಗೂ ಡೀಸೆಲ್ 81.07 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 87.04ರೂ.ಹಾಗೂ ಡೀಸೆಲ್ 78.87ರೂ. ತಲುಪಿದೆ. 2018ರ ಅಕ್ಟೋಬರ್ 4ರಂದು ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 84 ರೂ.ಆಗಿತ್ತು. ಇದು ಈವರೆಗಿನ ಗರಿಷ್ಠ ಬೆಲೆ.ಆಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಪ್ರತಿ ಲೀಟರ್ಗೆ 1.5ರೂ.ಕಡಿತ ಮಾಡಿತ್ತು. ಜೊತೆಗೆ ತೈಲ ಮಾರಾಟ ಕಂಪನಿಗಳು ಲೀಟರ್ಗೆ ೧ರೂ. ಕಡಿಮೆ ಮಾಡಿದ್ದವು.
Courtesyg: Google (photo)