ಭಾರತೀಯ ಡೆವಲಪರ್‌ಗಳಿಗೆ ನೆರವಾಗಲು ಪೇಟಿಎಂ ಮಿನಿ ಆಪ್ ಸ್ಟೋರ್‌ನ್ನು ಚಾಲನೆಗೊಳಿಸಿದೆ. ಈ ಮೂಲಕ ಗೂಗಲ್ ಜೊತೆಗೆ ಇನ್ನಷ್ಟು ಸಂಘರ್ಷಕ್ಕೆ ಅಣಿಯಾಗಿದೆ.
ಕೆಲವೇ ವಾರಗಳ ಹಿಂದೆ ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂನ್ನು ನಿರ್ಬಂಧಿಸಲಾಗಿತ್ತು. ಕ್ರೀಡೆಗಳಲ್ಲಿ ಜೂಜು ಸಂಬAಧಿಸಿದ ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದೆ. ಬೆಟ್ಟಿಂಗ್ ಚಟುವಟಿಕೆಗಳಿಗೆ ನೆರವಾಗುತ್ತಿದೆ ಎನ್ನುವುದು ಗೂಗಲ್ ಆರೋಪ. ಪೇಟಿಎಂ ವ್ಯಾಲೆಟ್, ಪೇಮೆಂಟ್ಸ್ ಬ್ಯಾಂಕ್, ಯುಪಿಐ, ನೆಟ್ ಬ್ಯಾಂಕಿAಗ್ ಮತ್ತು ಕಾರ್ಡ್ ಸೇವೆ ಒದಗಿಸುತ್ತಿದೆ. ನಿಷೇಧವÀನ್ನು ಸವಾಲಾಗಿ ಸ್ವೀಕರಿಸಿರುವ ಪೇಟಿಎಂ, ಗೂಗಲ್‌ಗೆ ಸಡ್ಡು ಹೊಡೆದಿದೆ. ಅದÀÄ ಆರಂಭಿಸಿರುವ ಉಪಕ್ರಮದಲ್ಲಿ 300 ಕ್ಕೂ ಹೆಚ್ಚು ಅಪ್ಲಿಕೇಶನ್ ಆಧರಿತ ಸೇವಾ ಪೂರೈಕೆದಾರರಾದ ಡಿಕ್ಯಾಥ್ಲಾನ್, ಓಲಾ, ಪಾರ್ಕ್+, ರ‍್ಯಾಪಿಡೋ, ನೆಟ್‌ಮೆಡ್ಸ್, ಐಎಂಜಿ, ಡೊಮಿನೋಸ್ ಪಿಜಾ, ಫ್ರೆಶ್‌ಮೆನು, ನೋಬ್ರೊಕರ್ ಮತ್ತಿತರ ಕಂಪನಿಗಳು ಕೈ ಜೋಡಿಸಿವೆ.
-Courtesyg: Google