ಪೇಟಿಎಂ ಮನಿ ತನ್ನ ಒಡೆತನದ ನಾನಾ ಕಂಪನಿಗಳ ಐಪಿಒ(ಆರಂಭಿಕ ಸಾರ್ವಜನಿಕ ಹೂಡಿಕೆ ಅವಕಾಶ)ದಲ್ಲಿ ಹೂಡಿಕೆ ಮಾಡುವ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಪೇಟಿಎಂ ಹೇಳಿದೆ. ಇದರಿಂದ ರಿಟೇಲ್ ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಅವಕಾಶ ಸಿಗಲಿದೆ. ಐಪಿಒ ಅರ್ಜಿಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗಿದೆ, ಸರಳಗೊಳಿಸಲಾಗಿದೆ.
ವರ್ಷದೊಳಗೆ ಶೇ.೮ರಿಂದ ಶೇ.೧೦ರಷ್ಟು ಮಾರುಕಟ್ಟೆ ಪಾಲು ಹೊಂದುವ ಗುರಿ ಕಂಪನಿಗೆ ಇದೆ. ಹೂಡಿಕೆದಾರರ ಬ್ಯಾಂಕ್ ಖಾತೆಗಳಿಗೆ ಜೋಡಿಸಿರುವ ಯುಪಿಐ ಐಡಿ ಮೂಲಕ ತ್ವರಿತವಾಗಿ ಅರ್ಜಿ ಸಲ್ಲಿಸಲು ಪೇಟಿಎಂ ಮನಿ ಅವಕಾಶ ಕಲ್ಪಿಸಿದೆ.ಯಾವ ಕಂಪನಿ ಐಪಿಒ ಬಿಡುಗಡೆ ಮಾಡಲಿದೆ, ಕಂಪನಿಯ ಆರ್ಥಿಕ ಸ್ಥಿತಿಗತಿ ಹಾಗೂ ಈ ಹಿಂದಿನ ಐಪಿಒಗೆ ಸಂಬAಧಿಸಿದ ಮಾಹಿತಿಗಳ ಪರಿಶೀಲನೆ ಮಾಡಬಹುದು. ಈ ಸೇವೆಯು ಪೇಟಿಎಂ ಮನಿಆ್ಯಪ್ ಮತ್ತು ಜಾಲತಾಣದಲ್ಲಿ ಲಭ್ಯವಿದೆ.
Courtesyg: Google (photo)