ಬೆಂಗಳೂರು: ಇದೇ ತಿಂಗಳ 22ರಿಂದ ನಮ್ಮ ರಾಜ್ಯದಲ್ಲಿ 6, 7, 8 ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತೆ. ಜುಲೈ15 ರಿಂದ ಕರ್ನಾಟಕ ರಾಜ್ಯದ ಮುಂದಿನ ಶೈಕ್ಷಣಿಕ ವರ್ಷ ಆರಂಭ ಆಗಲಿದೆ. ಒಂದನೇ ತಾರೀಖಿನಿಂದ ವಿದ್ಯಾಗಮ ಮಾಡುವ ಬಗ್ಗೆ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಾಲೆಗಳ ಆರಂಭದ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಒಂದನೇ ತರಗತಿಯಿಂದ ಚಟುವಟಿಕೆ ಆರಂಭ ಮಾಡೋಕೆ ಒತ್ತಾಯ ಬರ್ತಾ ಇದೆ. 6,7,8,9ಕ್ಕೆ ವಿದ್ಯಾಗಮ ತರಗತಿ ಆರಂಭ ಮಾಡಿದ್ದೇವೆ ಎಂದು ಹೇಳಿದರು.
ಅಜೀಂ ಪ್ರೇಮ್ ಜಿ ಅವರು ಒಂದು ಸರ್ವೇ ಮಾಡಿದ್ದಾರೆ. ಆರು ರಾಜ್ಯಗಳಲ್ಲಿ ಸರ್ವೇ ಮಾಡಿದ್ದಾರೆ. ಶಾಲೆಗಳು ಇಲ್ಲದೆ ಮಕ್ಕಳ ಮೇಲೇ ಏನು ಪರಿಣಾಮ ಬೀರಿದೆ. ಅದರಲ್ಲೂ ಗಣಿತದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಶೇ.80 ರಷ್ಟು ಮಕ್ಕಳ ಅಕ್ಷರ ಮರೆತಿದ್ದಾರೆ. ಸಿಬಿಎಸ್ ಸಿ ಅವರು ಎಪ್ರಿಲ್ 1 ರಿಂದ ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹೇಳಿದರು.