ಫ್ಯೂಚರ್–ರಿಲಯನ್ಸ್ ಒಪ್ಪಂದಕ್ಕೆ ತಡೆ

ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರಿಟೇಲ್ ಕಂಪನಿಯ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ(ಆರ್‌ಐಎಲ್) ₹ ೨೪,೭೧೩ ಕೋಟಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಿಂಗಾಪುರದ ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯನ್ನು ಪ್ರಶ್ನಿಸುವುದಾಗಿ ಫ್ಯೂಚರ್ ಸೋಮವಾರ ಹೇಳಿದೆ. ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಮಧ್ಯಸ್ಥಿಕೆ ಕೇಂದ್ರ ತಡೆಯಾಜ್ಞೆ ನೀಡಿದೆ. ಆದರೆ, ಅಮೆಜಾನ್ ಕಂಪನಿ ಉಲ್ಲೇಖಿಸಿರುವ ಒಪ್ಪಂದದಲ್ಲಿ ತಾನು ಭಾಗಿದಾರ ಅಲ್ಲ ಎಂದು ಫ್ಯೂಚರ್ ಕಂಪನಿ ಹೇಳಿದೆ. ಅಮೆಜಾನ್ ಕಳೆದ ವರ್ಷ ಫ್ಯೂಚರ್ ಕಂಪನಿಯಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಖರೀದಿಸಿತ್ತು. ರಿಟೇಲ್ ಮತ್ತು ಸಗಟು ವ್ಯಾಪಾರ, ಸರಕು ಸಾಗಣೆ, ಗೋದಾಮು ವಹಿವಾಟುಗಳನ್ನು ಫ್ಯೂಚರ್ ಕಂಪನಿ, ರಿಲಯನ್ಸ್ಗೆ ಮಾರಲು ಮುಂದಾಗಿರುವುದು ಒಪ್ಪಂದದ ಉಲ್ಲಂಘನೆ ಎಂದು ಅಮೆಜಾನ್ ಹೇಳುತ್ತಿದೆ. ಅಂತಿಮ ತೀರ್ಪು ಬರುವವರೆಗೆ ಫ್ಯೂಚರ್ ಹಾಗೂ ಅದರ ಪ್ರವರ್ತಕರು  ಮಾರಾಟ ಕುರಿತು ಮುನ್ನಡೆಯಬಾರದು ಎಂದು ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್‌ಐಎಸಿ) ಭಾನುವಾರ ಆದೇಶಿಸಿದೆ. ಆದರೆ, ಕಾನೂನು ಸಲಹೆ ಪಡೆದ ನಂತರವೇ ಫ್ಯೂಚರ್ ಕಂಪನಿಯ ಕೆಲವು ವಹಿವಾಟುಗಳನ್ನು ಖರೀದಿಸುವ ತೀರ್ಮಾನ ಕೈಗೊಂಡಿರುವುದಾಗಿ ರಿಲಯನ್ಸ್ ಹೇಳಿದೆ. ಮಧ್ಯಸ್ಥಿಕೆ ಕೇಂದ್ರದ ತೀರ್ಮಾನವನ್ನು ಅಮೆಜಾನ್ ಸ್ವಾಗತಿಸಿದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top