ಯಾಸ್ ಇಂದು ಅಪ್ಪಳಿಸಲಿದ್ದು, ಇನರ ಸ್ಥಳಾಂತರಕ್ಕೆ ಸರ್ಕಾರಗಳು ಪರದಾಡುತ್ತಿವೆ. ಈ ಚಂಡಮಾರುತದ ಮೂಲವಾದ ಬಂಗಾಳ ಕೊಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ, ಹೆಚ್ಚು ಬಿಸಿಯಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಬಂಗಾಳ ಕೊಲ್ಲಿಯಲ್ಲಿ ಉಷ್ಣತೆ 2 ಡಿಗ್ರಿ ಸೆಂಟಿಗ್ರೇಡ್ ಅಧಿಕವಿದೆ ಎಮದು ಪುಣೆಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟ್ರಾಲಜಿಯ ವಿಜ್ಞಾನಿಗಳು ಹೇಳಿದ್ದಾರೆ. ಸಾಧಾರಣವಾಗಿ ಬಂಗಾಳ ಕೊಲ್ಲಿಯ ಚಂಡಮಾರುತಗಳು ಅತ್ಯಂತ ತೀವ್ರವಾಗಿರಲಿದ್ದು, ಕಳೆದ ಮಾರ್ಚ್‍ನಲ್ಲಿ ಪಶ್ಚಿಮ ಬಂಗಾಳದಲ್ಲಿ ಭಾರಿ ಜನ-ಆಸ್ತಿ ನಾಶಕ್ಕೆ ಅಂಫನ್ ಕಾರಣವಾಗಿತ್ತು. 1999ರಲ್ಲಿ ಒಡಿಷಾದ ಪಾರಾದೀಪ್‍ನ್ನು ಹಾಳುಗೆಡವಿದ ಸೂಪರ್ ಸೈಕ್ಲೋನ್ ಹಾಗೂ ಆನಂತರ 2019ರಲ್ಲಿ ಫನಿ ಒಡಿಷಾವನ್ನು ವಾರಗಟ್ಟಲೆ ಕಾಡಿ ಅಪಾರ ನಾಶಕ್ಕೆ ಕಾರಣವಾಗಿತ್ತು. ಆನಂತರ ಕರಾವಳಿಗೆ ಅಪ್ಪಳಿಸಲಿರುವ ತೀವ್ರ ಶಕ್ತಿಯುತ ಚಂಡಮಾರುತ ಯಾಸ್.
ಮೇ ಮಾಸದಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳ ಕಾಟ ಅನಿರೀಕ್ಷಿತವೇನಲ್ಲ. ಮೇಲ್ಮೈ ಉಷ್ಣಾಂಶ ಹೆಚ್ಚಳ ಇದಕ್ಕೆ ಕಾರಣ. ಮಣೆ ಮಾರುತಗಳನ್ನು ಅಂಡಮಾನ್‍ಗೆ ಹಾಗೂ ಆನಂತರ ಕೇರಳಕ್ಕೆ ಸೆಳೆಯಲು ಚಂಡಮಾರುತಗಳು ನೆರವಾಗುತ್ತವೆ. ವಿಜ್ಞಾನಿಗಳ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ಕಡಿಮೆಯಾಗಿ ಅರೇಬಿಯನ್ ಸಮುದ್ರದಲ್ಲಿ ಹೆಚ್ಚಳವಾಗಲಿವೆ.
****