ಬಿಇಎಂಎಲ್ ಷೇರು ವಿಕ್ರಯ: ಪ್ರಾಥಮಿಕ ಬಿಡ್ ಆಹ್ವಾನ

ಬಿಇಎಂಎಲ್ ಕಂಪನಿಯಲ್ಲಿನ ಶೇ.26ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಪ್ರಾಥಮಿಕ ಬಿಡ್ ಸಲ್ಲಿಸುವಂತೆ ಆಹ್ವಾನಿಸಿದೆ. ಶೇ.26ರಷ್ಟು ಷೇರು ಖರೀದಿಸಿದವರಿಗೆ ಕಂಪನಿಯ ಆಡಳಿತ ನಿರ್ವಹಣೆ ಅಧಿಕಾರ ಸಿಗಲಿದೆ. ಎರಡು ಹಂತಗಳ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಸರ್ಕಾರ ತನ್ನ ಹೂಡಿಕೆಯನ್ನು ಹಿಂಪಡೆಯಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.

ಷೇರು ಖರೀದಿಗೆ ಆಸಕ್ತಿ ಇರುವವರು ಮಾ.೧ರೊಳಗೆ ಅರ್ಜಿ ಸಲ್ಲಿಸಬೇಕು. ಹಾಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಶೇ.26ರಷ್ಟು ಷೇರುಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ 1,000 ಕೋಟಿ ರೂ. ಸಿಗಬಹುದು. ರಕ್ಷಣೆ, ರೈಲು, ಇಂಧನ, ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಬಿಇಎಂಎಲ್ ತೊಡಗಿಸಿ ಕೊಂಡಿದೆ. 2019-20ರಲ್ಲಿ ಕಂಪನಿಯ ಒಟ್ಟು ಆದಾಯ 3,028 ಕೋಟಿ ರೂ. ಬಿಇಎಂಎಲ್ ಖಾಸಗೀಕರಣ ಕುರಿತು ಸಲಹೆ ನೀಡಲು ಕೇಂದ್ರ ಸರ್ಕಾರ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಕಂಪನಿಯನ್ನು ನೇಮಿಸಿದೆ. ಈಗ ಕಂಪನಿಯಲ್ಲಿ ಇರುವ ಸರ್ಕಾರದ ಷೇರುಪಾಲು ಶೇ.54.03 ರಷ್ಟು. ಬಿಇಎಂಎಲ್‌ನ ಶೇ.26ರಷ್ಟನ್ನು ಮಾರಾಟ ಮಾಡಲು ನೀತಿ ಆಯೋಗ ಶಿಫಾರಸು ಮಾಡಿದೆ ಎಂದು  2019ರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ಸರ್ಕಾರ ತಿಳಿಸಿತ್ತು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top