ಬೆಂಗಳೂರಿನ ಜನರಿಗೆ ಸ್ಮಾರ್ಟ್ಕಾರ್ಡ್ ರಿಚಾರ್ಜ್ ದುಬಾರಿ

ಟೋಕನ್ ವಿತರಿಸುವುದಿಲ್ಲ, ಹಳೆಯ ಸ್ಮಾರ್ಟ್ಕಾರ್ಡ್ಗಳನ್ನು ವೆಬ್‌ಸೈಟ್‌ನಲ್ಲಿಯೇ ರಿಚಾರ್ಜ್ ಮಾಡಿಸಿಕೊಳ್ಳಬೇಕು, ರಿಚಾರ್ಜ್ ಮಾಡಿಸಿಕೊಂಡ ಒಂದು ಗಂಟೆಯ ನಂತರವೇ ಪ್ರಯಾಣಿಸಬೇಕು, ಸ್ಮಾರ್ಟ್ಕಾರ್ಡ್ ರಿಚಾರ್ಜ್ ಮಾಡಿಸಿಕೊಂಡ 7 ದಿನಗಳೊಳಗೇ ಬಳಸಬೇಕು. ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ವಿಧಿಸಿರುವ ಷರತ್ತುಗಳಿವು. ಈ ನಿರ್ಬಂಧಗಳಿAದ ಬಹುತೇಕ ಪ್ರಯಾಣಿಕರು ಎರಡೆರಡು ಸ್ಮಾರ್ಟ್ಕಾರ್ಡ್ ಖರೀದಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹಳೆಯ ಸ್ಮಾರ್ಟ್ಕಾರ್ಡ್ ಇದ್ದರೂ ರಿಚಾರ್ಜ್ ಮಾಡಿಸುವುದು ಮರೆತು ಹೋಗುತ್ತದೆ. ರಿಚಾರ್ಜ್ ಮಾಡಿಸಿದರೂ ಒಂದು ಗಂಟೆ ಕಾಯುವಷ್ಟು ಸಮಯ ಇರುವುದಿಲ್ಲ. ಕಾರ್ಡ್ ಇದ್ದರೂ, ಹೊಸ ಕಾರ್ಡ್ ಖರೀದಿಸಿ ಮುಂದಾದ ಪ್ರಯಾಣಿಕರು. ಸೋಂಕು ನಿಯಂತ್ರಣಕ್ಕೆ ಈ ಕ್ರಮಗಳು ಅನಿವಾರ್ಯ ಇರಬಹುದು. ಆದರೆ, ಸ್ಮಾರ್ಟ್ಕಾರ್ಡ್ ರಿಚಾರ್ಜ್ಗೆ ಬೇರೆ ಸರಳ ವ್ಯವಸ್ಥೆಯನ್ನಾದರೂ ಮಾಡಬೇಕು. ತಾಸುಗಟ್ಟಲೇ ಕಾಯಲು ಯಾರಿಗೆ ಸಮಯ ಇರುತ್ತದೆ? ಪ್ರಯಾಣದ ಮೊತ್ತಕ್ಕಿಂತ ಸ್ಮಾರ್ಟ್ಕಾರ್ಡ್ಗಳಿಗೇ ಹೆಚ್ಚು ಖರ್ಚು ಮಾಡಬೇಕಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕನಿಷ್ಠ ₹200 ಬೇಕು: ‘ನಾನು ಮೆಜೆಸ್ಟಿಕ್ ನಿಲ್ದಾಣದಿಂದ ಜೆ.ಪಿ. ನಗರಕ್ಕೆ ಹೋಗಬೇಕಾಗಿತ್ತು. ಬಯ್ಯುತ್ತಲೇ ಹೊಸ ಕಾರ್ಡ್ ಖರೀದಿಸಿ ಪ್ರಯಾಣ ಮುಂದುವರಿಸುತ್ತಾರೆ. ಈವರೆಗೆ ಶೇ 50ರಿಂದ ಶೇ 60ರಷ್ಟು ಪ್ರಯಾಣಿಕರು ಎರಡೆರಡು ಸ್ಮಾರ್ಟ್ಕಾರ್ಡ್ಗಳನ್ನು ಖರೀದಿಸಿದ್ದಾರೆ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top