ಬೆಂಗಳೂರಿನ 3 ಕೇಂದ್ರಗಳಲ್ಲಿ ಲಸಿಕೆ ತಾಲೀಮು

ಕೋವಿಡ್ ಲಸಿಕೆಗೆ ಸಂಬಂಧಿಸಿದಂತ ಇಂದು ತಾಲೀಮು ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯ ಎರಡುಆರೋಗ್ಯ ಕೇಂದ್ರಗಳು ಹಾಗೂ ನಗರ ಹೊರವಲಯದ ಒಂದು ಕೇಂದ್ರವನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ತಿಳಿಸಿದ್ದಾರೆ. ಇದೇ ಹೊತ್ತಿನಲ್ಲಿ ಶಿವಮೊಗ್ಗ, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲೂ ಲಸಿಕೆ ವಿತರಣೆ ಅಣಕು ಅಭಿಯಾನ ನಡೆಸಲು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಅಧಿಕೃತ ಲಸಿಕೆಯ ವಿತರಣೆಗೆ ಮುನ್ನ ಸಿದ್ಧತೆ ಸಮರ್ಪಕವಾಗಿದೆಯೇ ಎಂಬುದನ್ನು ನೋಡಬೇಕು. ಲೋಪವಿದ್ದರೆ ಸರಿಪಡಿಸಿಕೊಳ್ಳಬಹುದು. ಅದಕ್ಕಾಗಿಅಣಕುಅಭಿಯಾನ ಅಗತ್ಯವಿದೆ. ಡ್ರೈ ರನ್‌ಗೆ ಆಯ್ಕೆಯಾದ ಐದು ಜಿಲ್ಲೆಗಳ ಪ್ರಾಥಮಿಕ ಆರೋಗ್ಯಕೇಂದ್ರ, ತಾಲೂಕುಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ನಿಗದಿತ ಆರೋಗ್ಯ ಸಿಬ್ಬಂದಿ ಮೂಲಕ ತಲಾ 25 ಜನರಿಗೆ ಲಸಿಕೆ ಕೊಡಲಾಗುತ್ತದೆ. ಸಂಬಂಧಿಸಿದ ಮಾಹಿತಿಯನ್ನು ಮೊಬೈಲ್ ಮೂಲಕ ನೀಡಲಾಗುವುದು ಎಂದು ತಿಳಿಸಿದರು. ಪೂರ್ವಭಾವಿ ಸಿದ್ಧತೆ ಸರಿಯಾಗಿದ್ದರೆ, ಲಸಿಕೆ ಬಂದಕೂಡಲೇ ಸುಗಮವಾಗಿ ವಿತರಿಸಲು ಸಾಧ್ಯ.ಎಲ್ಲರಿಗೂ ಹಂತ ಹಂತವಾಗಿ ಲಸಿಕೆ ನೀಡಿಕರ್ನಾಟಕವನ್ನುಕೊರೊನಾ ಮುಕ್ತ ಮಾಡಬಹುದುಎಂದು ಹೇಳಿದರು.

ರೂಪಾಂತರ ವೈರಾಣು: ಸೋಂಕಿತರ ಸಂಖ್ಯೆ ಹೆಚ್ಚಳ: ಬೆಂಗಳೂರಿನಲ್ಲಿ ಶುಕ್ರವಾರ ಮೂರು ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿತರ  ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಬ್ರಿಟನ್‌ನಿಂದ ನಗರಕ್ಕೆ ವಾಪಸಾದವರ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರಲ್ಲಿ ಮೂವರಲ್ಲಿ ಹೊಸ ಮಾದರಿಯ ವೈರಾಣು ದೃಢಪಟ್ಟಿದೆ. ಇವರಲ್ಲಿ ಒಬ್ಬರು ಬೊಮ್ಮನಹಳ್ಳಿ ವಲಯದವರಾಗಿದ್ದು, ಸೋಂಕಿತ ತಾಯಿ ಮತ್ತು ಮಗಳ ಸಂಪರ್ಕ ಹೊಂದಿದ್ದರು. ಉಳಿದ ಇಬ್ಬರು ರಾಜಾಜಿನಗರ ನಿವಾಸಿಗಳು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top