ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು ಮತ್ತು ಹೆಸರು ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಸರ್ಕಾರ 2020–21ನೇ ಸಾಲಿಗೆ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರಾಜ್ಯವು ಹೆಚ್ಚುವರಿ 1 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧರಿಸಿದೆ. ಭತ್ತ ಖರೀದಿಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಜನವರಿ ಕೊನೆಯವರೆಗೆ ರೈತರು ನೋಂದಣಿ ಮಾಡಿಸಬಹುದು. ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಾಲ್ನAತೆ ಗರಿಷ್ಠ 75 ಕ್ವಿಂಟಾಲ್ ಭತ್ತ ಖರೀದಿಸಲಾಗುವುದು ಎಂದರು. ಡಿ ಡಿ.15 ರಿಂದ ರಾಗಿ ಮತ್ತು ಬಿಳಿಜೋಳ ಖರೀದಿ ಆರಂಭಿಸಲಾಗುವುದು. ರಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್ನAತೆ ಗರಿಷ್ಠ 50 ಕ್ವಿಂಟಾಲ್ ಹಾಗೂ ಬಿಳಿ ಜೋಳ ಪ್ರತಿ ಎಕರೆಗೆ ೧೫ ಕ್ವಿಂಟಲ್ನಂತೆ ಗರಿಷ್ಠ ೭೫ ಕ್ವಿಂಟಾಲ್ ಖರೀದಿಸಲಾಗುವುದು. ತೊಗರಿ ಖರೀದಿಗೆ ನೋಂದಣಿ ಡಿ.15 ರಿಂದ ಆರಂಭವಾಗಲಿದ್ದು, ಜನವರಿ 1 ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಖರೀದಿ ಅವಧಿ 90 ದಿನ. ಪ್ರತಿ ಎಕರೆಗೆ ಗರಿಷ್ಠ 7.5 ಕ್ವಿಂಟಲ್ನಂತೆ ಗರಿಷ್ಠ 20 ಕ್ವಿಂಟಾಲ್ ಖರೀದಿಸಲಾಗುವುದು ಎಂದರು.
Courtesyg: Google (photo)