ನಿಧಾನವಾಗಿ ಆರ್ಥಿಕ ಚೇತರಿಕೆ ಆಗುತ್ತಿದ್ದರೂ, ಹಣದುಬ್ಬರ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಸದ್ಯಕ್ಕಂತೂ ಕಂಡುಬರುತ್ತಿಲ್ಲ. ಹಣದುಬ್ಬರ ಮಾರ್ಚ್ನಲ್ಲಿ ಶೇ.5.91 ಇತ್ತು. ಉಳಿದಂತೆ ಶೇ.6.58- ಶೇ.7.61ರ ಆಸುಪಾಸಿನಲ್ಲಿದೆ. ಈ ವರ್ಷ ಬಹುಪಾಲು ಸಮಯ ಆಹಾರ ಪದಾರ್ಥಗಳ ಬೆಲೆ ಹೆಚ್ಚು ಇದ್ದ ಕಾರಣ ಹಣದುಬ್ಬರ ಕೂಡ ಅಧಿಕವಾಗಿದೆ.ಚಿಲ್ಲರೆ ಹಣದುಬ್ಬರ ದರ ಸರಾಸರಿ ಶೇ.6.3 ಇರಲಿದೆ. ಮುಂಗಾರು ಬೆಳೆ ಚೆನ್ನಾಗಿ ಆಗಿದ್ದು, ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ. ಹೀಗಾಗಿ, ಧಾನ್ಯಗಳ ಬೆಲೆಯಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಚಳಿಗಾಲದಲ್ಲಿ ಕೆಲವು ತರಕಾರಿಗಳ ಬೆಲೆ ಕೂಡ ಇಳಿಕೆ ಆಗಬಹುದು. ಇನ್ನಿತರ ಆಹಾರ ಪದಾರ್ಥಗಳ ಬೆಲೆ ಹೆಚ್ಚಿನ ಮಟ್ಟದಲ್ಲೇ ಇರಬಹುದು ಎಂದು ಆರ್‌ಬಿಐ ಅಂದಾಜಿಸಿದೆ. ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಚಿಲ್ಲರೆ ಹಣದುಬ್ಬರ ದರ ಮಾ.2021ಕ್ಕೆ ಶೇ.5.8 ಹಾಗೂ 2021ರ ಸೆಪ್ಟೆಂಬರ್ ವೇಳೆಗೆ ಶೇ.5.3– ಶೇ.4.6ಕ್ಕೆ ತಗ್ಗಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ.
Courtesyg: Google (photo)