ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ. ಎಂ. ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು, ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಬಗ್ಗೆ ತಿಳಿಸಿದರು. ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು. ೨೦೧೯-೨೦ ನೇ ಸಾಲಿನಲ್ಲಿ ಸಂಘ ೧೧,೮೧,೨೩೩ ರೂ. ನಿವ್ವಳ ಲಾಭ ಗಳಿಸಿರುವುದಕ್ಕೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು. ಉಪ ವ್ಯವಸ್ಥಾಪಕ ಚಂದ್ರಪ್ಪ, ವಿಸ್ತರಣಾಧಿಕಾರಿ ಆನಂದ್, ಆಡಳಿತ ಮಂಡಳಿ ನಿರ್ದೇಶಕರಾದ ನಾಗಯ್ಯ. ಕೃಷ್ಣೇಗೌಡ, ಬಿ.ಸಿ ಪರಮೇಶ, ಮಹೇಶ, ಬಿ.ಎಸ್.ಶಿವಮಾದೇಗೌಡ, ಶಿವಲಿಂಗಯ್ಯ, ಗೌರಮ್ಮ. ನಾಗರತ್ನಮ್ಮ ಹಾಗೂ ಮುಖ್ಯ ಕಾರ್ಯನಿರ್ವಾಹಕ ಬಿ.ಎಂ. ಭರತೇಶ, ಸಿಬ್ಬಂದಿ ವರ್ಗ, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಉತ್ತಮ ವಾದ ಸುದ್ದಿಗಳು ಬರುತ್ತಿವೆ ಇನ್ನೂ ಉತ್ತಮ ವಾದ ಸುದ್ದಿ ಗಳು ಬರಲಿ
ಉತ್ತಮ ವಾಗಿ ಒಳ್ಳೆಯ ಸುದ್ದಿ ಗಳನ್ನು ಕಲೆಹಾಕಿ ಜನರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ
ಉತ್ತಮ ವಾಗಿ ಒಳ್ಳೆಯ ಸುದ್ದಿ ಗಳನ್ನು ಕಲೆಹಾಕಿ ಜನರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ