ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ.23ರಂದು 32,779 ಚೀಲ ಮೆಣಸಿನಕಾಯಿ ಆವಕವಾಗಿದ್ದು, ಬ್ಯಾಡಗಿ ಕಡ್ಡಿ ಹಾಗೂ ಗುಂಟೂರ ತಳಿ ಮೆಣಸಿನಕಾಯಿ ದರ ಏರಿಕೆಯಾಗಿದೆ. ದೀಪಾವಳಿ ಬಳಿಕ ಆವಕದಲ್ಲಿ ತುಸು ಚೇತರಿಕೆ ಕಂಡಿದೆ. ಬ್ಯಾಡಗಿ ಕಡ್ಡಿ ಗರಿಷ್ಠ ಪ್ರತಿ ಕ್ವಿಂಟಲ್‌ಗೆ 3 ಸಾವಿರ ರೂ. ಏರಿಕೆಯಾಗಿದ್ದರೆ, ಖಾರದ ಅಂಶ ಹೆಚ್ಚಿರುವ ಗುಂಟೂರು ತಳಿ 13 ಸಾವಿರ ರೂ. ತಲುಪಿದೆ. ಖಾರ ಕಡಿಮೆ ಇರುವ ಕಡ್ಡಿ ಹಾಗೂ ಡಬ್ಬಿ ಮೆಣಸಿನಕಾಯಿ ಪುಡಿಯೊಂದಿಗೆ ಇದನ್ನು ಬೆರೆಸಲಾಗುತ್ತಿದ್ದು ಇದರಿಂದ ಮೆಣಸಿನಕಾಯಿ ಬೆಲೆ ಏರಿಕೆಯಾದೆ.
Courtesyg: Google (photo)