ಅತ್ಯಾಧುನಿಕ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ರಫ್ತು ಮಾಡಲು ಭಾರತ ಮತ್ತು ರಷ್ಯಾ ಯೋಜನೆ ತಯಾರಿಸುತ್ತಿವೆ ಎಂದು ರಷ್ಯಾ ಡೆಪ್ಯುಟಿ ಚೀಫ್ ಆಫ್ ಮಿಷನ್ ರೋಮನ್ ಬಬುಶ್ಕಿನ್ ತಿಳಿಸಿದರು. ಭಾರತ ಹಾಗೂ ರಷ್ಯಾ ಒಟ್ಟಾಗಿ ಈ ಕ್ಷಿಪಣಿ ತಯಾರಿಸುತ್ತಿದ್ದು, ಜಲಾಂತರ್ಗಾಮಿ ನೌಕೆ, ಯುದ್ಧ ನೌಕೆ, ಯುದ್ಧ ವಿಮಾನ ಹಾಗೂ ನೆಲದಿಂದಲೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು. ಕ್ಷಿಪಣಿ ರಫ್ತು ಕುರಿತು ಫಿಲಿಪ್ಪೀನ್ಸ್ ಜೊತೆ ಮಾತುಕತೆ ನಡೆಸಿದೆ. ಕ್ಷಿಪಣಿಯ ಸಾಮರ್ಥ್ಯವನ್ನು 290 ಕಿಮೀನಿಂದ 400 ಕಿಮೀ ಗೆ ಹೆಚ್ಚಳ ಮಾಡಲಾಗಿದೆ. ಕ್ಷಿಪಣಿ ಗಂಟೆಗೆ 3,457 ಕಿಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಕಳೆದ ಅಕ್ಟೋಬರ್‌ನಲ್ಲಿ ಕ್ಷಿಪಣಿಯನ್ನು ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಹಾಗೂ ಆನಂತರ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆಗೊಳಿಸಿತ್ತು.
Courtesyg: Google (photo)