ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯಡಿ 86 ಸಾವಿರ ಕೋಟಿ ರೂ. ವೆಚ್ಚದಲ್ಲಿ 456 ಲಕ್ಷ ಟನ್ ಭತ್ತವನ್ನು ಖರೀದಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿ ಪ್ರಮಾಣ ಶೇ.೨೫ರಷ್ಟು ಹೆಚ್ಚಳಗೊಂಡಿದೆ.
2020-21ನೇ ಸಾಲಿನ ದವಸ ಧಾನ್ಯ ಖರೀದಿ ಮುಂದುವರಿದಿದೆ. ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಹತ್ತಿ ಖರೀದಿ ಚಾಲ್ತಿಯಲ್ಲಿದೆ. ಡಿ.27ರವರೆಗೆ 19 ಸಾವಿರ ಕೋಟಿ ರೂ ಮೌಲ್ಯದ 67 ಲಕ್ಷ ಹತ್ತಿ ಅಂಡಿಗೆಗಳನ್ನು ಖರೀದಿಸಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
Courtesyg: Google (photo)