ಭಾರತದ ಸೇನೆಪಡೆಗೆ ಎರಡನೇ ತಂಡ ರಫೇಲ್ ಯುದ್ಧವಿಮಾನಗಳು ಜಾಮ್‌ನಗರದ ವಾಯುನೆಲೆಗೆ ಬುಧವಾರ ಸಂಜೆ ಲಗ್ಗೆಇಟ್ಟಿವೆ. ಫ್ರಾನ್ಸ್ನಿಂದ ಹೊರಟ ಮೂರು ವಿಮಾನಗಳು ಎಲ್ಲಿಯೂ ನಿಲುಗಡೆ ಮಾಡದೇ ನೇರವಾಗಿ ಭಾರತಕ್ಕೆ ಬಂದಿವೆ. ಚೀನಾ ಗಡಿ ಸಂಘರ್ಷದ ಈ ವೇಳೆ ಭಾರತಕ್ಕೆ ಬಂದಿರುವ ಈ ವಿಮಾನಗಳು ವಾಯುಪಡೆಗೆ ಬಲ ತುಂಬಿವೆ. ಎರಡನೇ ತಂಡದ ಆಗಮನದ ಬಳಿಕ ಭಾರತದಲ್ಲಿ ರಫೇಲ್ ಯುದ್ಧವಿಮಾನಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಐದು ವಿಮಾನಗಳ ಮೊದಲ ತಂಡ ಜುಲೈ 29ರಂದು ಭಾರತಕ್ಕೆ ಆಗಮಿಸಿತ್ತು. ಫ್ರಾನ್ಸ್ನ ಡಾಸೊ ಕಂಪನಿಯ ಜತೆ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದವಾಗಿತ್ತು. ಖರೀದಿ ಮೊತ್ತ 59 ಸಾವಿರ ಕೋಟಿ. ಇತ್ತೀಚೆಗೆ ಸೇರ್ಪಡೆಗೊಂಡ ಐದು ರಫೇಲ್ ವಿಮಾನಗಳು ಪೂರ್ವ ಲಡಾಖ್‌ನಲ್ಲಿ ನಿಯೋಜನೆಗೊಂಡಿವೆ.
Courtesyg: Google (photo)