ಫೈಜರ್ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ಕೋರಿದೆ. ಲಸಿಕೆಯನ್ನು ಬಳಸಲು ಬ್ರಿಟನ್ ಮತ್ತು ಬಹ್ರೇನ್ ಸರ್ಕಾರಗಳು ಅನುಮತಿ ನೀಡಿವೆ.
ಲಸಿಕೆ ಬಳಕೆಗೆ ಬ್ರಿಟನ್ ಅತ್ಯಂತ ತರಾತುರಿಯಲ್ಲಿ ಅನುಮತಿ ನೀಡಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಫೈಜರ್ ಕಂಪನಿಯು ಭಾರತದ ಪ್ರಧಾನ ಔಷಧ ನಿಯಂತ್ರಕರಿಗೆ ಅನುಮತಿ ಕೋರಿ ಡಿ.4ರಂದು ಪತ್ರ ಬರೆದಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಭಾರತ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತೇವೆ. ಸರ್ಕಾರದ ಗುತ್ತಿಗೆಯ ಮೂಲಕ ಮಾತ್ರ ಲಸಿಕೆ ಪೂರೈಸುತ್ತೇವೆ ಎಂದು ಫೈಜರ್ ಹೇಳಿದೆ. ಸ್ಥಳೀಯ ಅಭಿವೃದ್ಧಿಪಡಿಸಿ ತಯಾರಾಗುವ ಲಸಿಕೆಯನ್ನು ಬಳಸುವುದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಫೈಜರ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಿನಲ್ಲಿ ಇರಿಸಬೇಕು. ಈ ವ್ಯವಸ್ಥೆ ಭಾರತದಲ್ಲಿ ಇಲ್ಲ.
Courtesyg: Google (photo)