ಅ.13ರಂದು ಮಂಗಳಗ್ರಹ ಭೂಮಿಗೆ ಹತ್ತಿರವಾಗಿ ಕಾಣಲಿದೆ. 2 ವರ್ಷ 2 ತಿಂಗಳಿಗೊಮ್ಮೆ ನಡೆಯುವ ಈ ಘಟನೆಯಲ್ಲಿ 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಮಂಗಳ ಕಾಣಿಸಲಿದ್ದು, ವಾರವಿಡೀ ಬರಿಗಣ್ಣಿಗೆ ಗೋಚರಿಸಲಿದೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ. ಕೆಂಡದAತೆ ಕಾಣುವ ಕಾರಣಕ್ಕೆ ಮಂಗಳ ಗ್ರಹಕ್ಕೆ ಅಂಗಾರಕ ಎಂಬ ಹೆಸರು ಬಂದಿದೆ. ಇಂಥ ಘಟನೆ ಮತ್ತೆ ಸಂಭವಿಸುವುದು 2.035ರಲ್ಲಿ. ಈ ಹಿಂದೆ ೨೦೦೩ ಹಾಗೂ ೨೦೧೮ ರಲ್ಲಿ ಭೂಮಿಗೆ ಹತ್ತಿರದಲ್ಲಿ ಮಂಗಳ ಗ್ರಹ ಗೋಚರಿಸಿತ್ತು. ಸೌರವ್ಯೂಹದ ಬೇರಾವ ಗ್ರಹವೂ ಕೆಂಪು ಬಣ್ಣದಿಂದ ಕಾಣುವುದಿಲ್ಲ. ಮಂಗಳ ಗ್ರಹದಲ್ಲಿ ವಾತಾವರಣವಿಲ್ಲದ ಹಿನ್ನೆಲೆಯಲ್ಲಿ ಕಬ್ಬಿಣದ ಆಕ್ಸೆöÊಡ್ ಹುಡಿಯ ಧೂಳು ಸೂರ್ಯನ ಬೆಳಕನ್ನು ಹೀರಿ ಕೆಂಬಣ್ಣ ಹೊರಸೂಸುವುದರಿಂದ, ಮಂಗಳ ಕೆಂಬಣ್ಣದಲ್ಲಿ ಕಂಗೊಳಿಸುತ್ತಾನೆ. ಬರಿಗಣ್ಣಿಗೆ ಕಾಣುವ ಶುಕ್ರ, ಮಂಗಳ, ಗುರು, ಶನಿ ಗ್ರಹಗಳು ಸೂರ್ಯನಿಂದ ಹೆಚ್ಚುಕಡಿಮೆ ಒಂದೇ ದೂರದಲ್ಲಿದ್ದರೂ, ಭೂಮಿಯಿಂದ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದೂರದಲ್ಲಿರುತ್ತವೆ. ೧೯೬೪ರಿಂದ ಮಂಗಳನ ಅಧ್ಯಯನಕ್ಕಾಗಿ ಕೃತಕ ಉಪಗ್ರಹಗಳನ್ನು ಹಾರಿಸಲಾಗಿದ್ದರೂ, ರಷ್ಯಾ, ಅಮೆರಿಕ ಮಾತ್ರ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ. ಈವರೆಗೆ ೫೬ ಕೃತಕ ಉಪಗ್ರಹಗಳು ಅಧ್ಯಯನಕ್ಕೆ ತೆರಳಿದ್ದರೂ, ಕೇವಲ ೨೬ ಮಾತ್ರ ಸಫಲವಾಗಿವೆ.
Courtesyg: Google (photo)