ಕರ್ನಾಟಕ ಭೂ ಸುಧಾರಣೆ (ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆ-೨೦೨೦ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕೃಷಿ ಭೂಮಿಯ ಗರಿಷ್ಠ ಮಿತಿಯನ್ನು೧೦೮ ಎಕರೆಗೆ ಇಳಿಸುವುದಾಗಿ ಹೇಳಿದ್ದ ಕಂದಾಯ ಸಚಿವರ ಭರವಸೆ ಸುಗ್ರೀವಾಜ್ಞೆಯಲ್ಲಿ ಉಲ್ಲೇಖವಾಗಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ೧೯೬೧ರ ಕಲಂ ೬೩ರ ಅಡಿ ಕೃಷಿ ಭೂಮಿ ಹೊಂದುವ ಗರಿಷ್ಠ ಮಿತಿಯನ್ನು೧೦೮ ಎಕರೆಗೆ ಇಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದರು. ಅದರ ಪ್ರಸ್ತಾಪ ಸುಗ್ರೀವಾಜ್ಞೆಯಲ್ಲಿ ಇಲ್ಲ. ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ವಿಧಾನಸಭೆ ಸಮ್ಮತಿ ನೀಡಿದ್ದರೂ, ವಿಧಾನಪರಿಷತ್ತಿನಲ್ಲಿ ಮಂಡನೆಯಾಗಿರಲಿಲ್ಲ. ಹೀಗಾಗಿ, ಮಸೂದೆ ಅನೂರ್ಜಿತಗೊಂಡಿತು. ಆಬಳಿಕ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ಮತ್ತೊಮ್ಮೆ ಒಪ್ಪಿಗೆ ನೀಡಿ, ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
Courtesyg: Google (photo)