ಕೋವಿಡ್ ಹಿನ್ನೆಲೆಯಲ್ಲಿ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಯಾನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) 11 ತಿಂಗಳ ಬಳಿಕ ನ. 7 ರಂದು ಪಿಎಸ್ಎಲ್ವಿ ಮೂಲಕ ಇಒಎಸ್–1 ಮತ್ತು ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿಕೊಂಡಿದೆ. 2019ರ ಡಿ.11 ರಂದು ಇಸ್ರೋ ನಡೆಸಿದ ಉಪಗ್ರಹ ಉಡಾವಣೆ ಕೊನೆಯ ಉಡಾವಣೆ ಆಗಿತ್ತು. ಮಾರ್ಚ್ನಲ್ಲಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್ನಿಂದ ಉಡಾವಣೆ ಮುಂದೂಡಲಾಯಿತು. ದೇಶ ಸೇರಿದಂತೆ ಹಲವು ವಿದೇಶಿ ಉಪಗ್ರಹಗಳ ಉಡಾವಣೆಯನ್ನು ಮುಂದೂಡಿದ್ದರಿAದ, ಇಸ್ರೋ ಆದಾಯ ಖೋತಾ ಆಗಿದೆ.
2018-19ವಿದೇಶಿ ಉಪಗ್ರಹಗಳ ಉಡಾವಣೆಯಿಂದ 324.19 ಕೋಟಿ ರೂ. ಆದಾಯವನ್ನು ಗಳಿಸಿತ್ತು. ಆದರೆ, ಈ ವರ್ಷ ಆದಾಯ ಬಹುಪಾಲು ಕುಸಿತವಾಗಿದೆ. ಆರ್ಥಿಕ ನಷ್ಟದ ಪ್ರಮಾಣ ಎಷ್ಟು ಎಂಬುದನ್ನು ಈಗಲೇ ಹೇಳಲು ಆಗದು ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ನ.7ರಂದು ಉಡಾವಣೆಯಾಗುವ ಭೂವೀಕ್ಷಣಾ ಉಪಗ್ರಹ 01 (ಇಒಎಸ್) ಕೃಷಿ, ಅರಣ್ಯ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಯ ಉದ್ದೇಶಕ್ಕೆ ನೆರವಾಗಲಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆ ಆಗಲಿದೆ. ಪಿಎಸ್ಎಲ್ವಿಯ 51ನೇ ಉಡಾವಣೆ ಇದಾಗಿದೆ. ಹೊಸದಾಗಿ ರಚಿತವಾಗಿರುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಲ್) ಮೂಲಕ ವಾಣಿಜ್ಯ ಉದ್ದೇಶದ ವಿದೇಶಿ ಉಪಗ್ರಹ ಉಡಾವಣೆ ನಡೆಯಲಿದೆ.
Courtesyg: Google (photo)