ಗ್ರಾಮೀಣ ಪ್ರದೇಶದಲ್ಲಿ ಕೃಷಿಗೆ ಸಂಬAಧಿಸಿದ ಯಾವುದೇ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ರೈತರೆಂದು ಘೋಷಿಸುವಂತೆ ಒತ್ತಾಯಿಸಿ, “ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ’ ಆಂದೋಲನದ ಭಾಗವಾಗಿ ಅ.15ರಂದು ರೈತ ಮಹಿಳೆಯರ ಜಾಥಾ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ. ರೈತ ಮಹಿಳೆಯರಿಗೆ “ಕಿಸಾನ್ ಕಾರ್ಡ್’ ಗುರುತಿನ ಚೀಟಿ ನೀಡಬೇಕು. ಸರ್ಕಾರದ 2007ರ ಆದೇಶದಂತೆ ಕುಟುಂಬದ ಭೂ ದಾಖಲೆಗಳಲ್ಲಿ ಕಡ್ಡಾಯವಾಗಿ ಪತಿ-ಪತ್ನಿ ಇಬ್ಬರ ಹೆಸರನ್ನು ದಾಖಲಿಸಬೇಕು. ಬಗರ್ ಹುಕುಂ ಮತ್ತಿತರ ಯೋಜನೆಗಳಲ್ಲಿ ಭೂರಹಿತ ಕುಟುಂಬಗಳಿಗೆ ಭೂಮಿ ಹಂಚುವಾಗ ಪತಿ-ಪತ್ನಿ ಇಬ್ಬರ ಹೆಸರು ದಾಖಲಿಸಬೇಕು ಎಂದು ಆಗ್ರಹಿಸಿದೆ. ಪಾಳು ಬಿದ್ದಿರುವ ಭೂಮಿಯಲ್ಲಿ ಬೇಸಾಯ ಮಾಡಲು ಮಹಿಳೆಯರಿಗೆ ಗುತ್ತಿಗೆ ನೀಡಬೇಕು. ಈ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯದಾದ್ಯಂತ ಕಂದಾಯ ನಿರೀಕ್ಷಕರ ಕಚೇರಿ ಎದುರು ಮಹಿಳಾ ರೈತರ ಜಾಥಾ ಮತ್ತು ಸಮಾವೇಶಗಳು ನಡೆಯಲಿದೆ.
Courtesyg: Google (photo)