ಮೇಕೆದಾಟುವಿನಲ್ಲಿ ಅಕ್ರಮ ನಿರ್ಮಾಣ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಜಂಟಿ ಸಮಿತಿ ರಚನೆಯನ್ನು ಪ್ರಶ್ನಿಸುವುದಾಗಿ ರಾಜ್ಯ ಹೇಳಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ದಕ್ಷಿಣ ವಲಯದ ಪೀಠ ಸೂಮೋಟೋ ಪ್ರಕರಣ ದಾಖಲಿಸಿಕೊಂಡು, ಯೋಜನಾ ಸ್ಥಳದಲ್ಲಿ ಪರಿಸರ ಪರಿಣಾಮ ಲೆಕ್ಕಾಚಾರವನ್ನು ಉಲ್ಲಂಘಿಸಿ ಏನಾದರೂ ಕಾಮಗಾರಿ ನಡೆದಿದೆಯೇ ಎನ್ನುವುದನ್ನು ಪರಿಶೀಲಿಸಲು ಜಂಟಿ ಸಮಿತಿಯನ್ನು ರಚಿಸಿತ್ತು. ಈ ಆದೇಶವನ್ನು ಹಿಂಪಡೆಯಬೇಕೆಂದು ಅರ್ಜಿ ಸಲ್ಲಿಸುವುದಾಗಿ ಸಂಪುಟ ಸಭೆ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜಂಟಿ ಸಮಿತಿಯು ಜುಲೈ 5ರಂದು ವರದಿ ನೀಡಬೇಕೆಂದು ಎನ್‍ಜಿಟಿ ಹೇಳಿತ್ತು. ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇದೆ. ಬೆಂಗಳೂರು ಹಾಗೂ ರಾಮನಗರ ಜಿಲ್ಲೆಗಳಿಗೆ ನೀರು ಪೂರೈಸಲು ಕರ್ನಾಟಕ ಈ ಯೋಜನೆ ರೂಪಪಿಸಿದೆ. ತಮಿಳುನಾಡು ಸರ್ಕಾರ 2018ರಲ್ಲಿ “ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಗೊತ್ತಿದ್ದೂ ಉಲ್ಲಂಘಿಸಿದೆ’ ಎಂದು ದೂರು ನೀಡಿತ್ತು.
****