ಮ್ಯೂಚುವಲ್ ಫಂಡ್ ಕಂಪನಿಗಳು ನವೆಂಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಗಳಿಂದ ಒಟ್ಟು 30,760 ಕೋಟಿ ರೂಪಾಯಿಯನ್ನು ಹಿಂದಕ್ಕೆ ಪಡೆದಿವೆ. ಎಂ.ಎಫ್. ಕಂಪನಿಗಳು ಲಾಭಗಳಿಕೆಯ ಉದ್ದೇಶದಿಂದ ಮಾರುಕಟ್ಟೆಯಿಂದ ಸತತವಾಗಿ ಆರು ತಿಂಗಳುಗಳಿಂದ ಹಣ ಹಿಂದಕ್ಕೆ ಪಡೆಯುತ್ತಿವೆ. ಇದರಿಂದಾಗಿ ಈ ವರ್ಷದ 10 ತಿಂಗಳುಗಳ ಅವಧಿಯಲ್ಲಿ ಎಂ.ಎಫ್. ಕಂಪನಿಗಳು ಷೇರು ಮಾರುಕಟ್ಟೆಗಳಿಂದ ಹಿಂದಕ್ಕೆ ಪಡೆದ ನಿವ್ವಳ ಮೊತ್ತವು 28ಸಾವಿರ ರೂ. ಕೋಟಿಗಿಂತ ಹೆಚ್ಚಾದಂತಾಗಿದೆ. ಎಂ.ಎಫ್. ಕಂಪನಿಗಳು ಹಣ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದರೂ, ವಿದೇಶಿ ಹೂಡಿಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಆಗುತ್ತಿರುವ ಕಾರಣ ದೇಶಿ ಷೇರು ಮಾರುಕಟ್ಟೆಗಳ ಸೂಚ್ಯಂಕಗಳು ಏರುಗತಿಯಲ್ಲಿ ಇವೆ.
Courtesyg: Google (photo)