ವಿಶ್ವಸಂಸ್ಥೆಯ ಪರಿಸರ ವಿಭಾಗವು ನೀಡುವ ಪ್ರತಿಷ್ಠಿತ ಯಂಗ್ ಚಾಂಪಿಯನ್ಸ್ ಆಫ್ ದಿ ಅರ್ಥ್–2020 ಪ್ರಶಸ್ತಿಗೆ ಭಾರತದ ನವೋದ್ಯಮಿಯೊಬ್ಬರು ಆಯ್ಕೆಯಾಗಿದ್ದಾರೆ. ಒಟ್ಟು ಏಳು ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ 7.35 ಲಕ್ಷ ರೂ. ನಗದು ಒಳಗೊಂಡಿದೆ. ಪರಿಸರ ಮಾಲಿನ್ಯ ತಡೆಗೆ ಪರಿಹಾರ ಕಂಡುಹಿಡಿದವರಿಗೆ ವಿಶ್ವಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದೆ. ಸಾಮಾಜಿಕ ಉದ್ಯಮ ತಕಚರ್ ಸಂಸ್ಥಾಪಕ, ಎಂಜಿನಿಯರ್ ಪದವೀಧರ 29 ವರ್ಷದ ವಿದ್ಯುತ್ ಮೋಹನ್ ಪ್ರಶಸ್ತಿಗೆ ಪಾತ್ರರಾದವರು. ಕೃಷಿ ತ್ಯಾಜ್ಯವನ್ನು ಸುಡುವುದರ ಬದಲು ಅದನ್ನು ಇಂಧನ, ಗೊಬ್ಬರ, ಮೌಲ್ಯವರ್ಧಿತ ರಾಸಾಯನಿಕಗಳಾಗಿ ಮಾರ್ಪಡಿಸಿ, ರೈತರಿಗೆ ಹೆಚ್ಚುವರಿ ಆದಾಯವನ್ನು ಬರುವ ನವೋದ್ಯಮವನ್ನು ಪ್ರಾರಂಭಿಸಿದ್ದಾರೆ ಎಂದು ವಿಶ್ವಸಂಸ್ಥೆ ಪರಿಸರ ಯೋಜನೆಯು ಪ್ರಕಟಣೆಯಲ್ಲಿ ತಿಳಿಸಿದೆ. ಭತ್ತದ ಹೊಟ್ಟು ಹಾಗೂ ಹುಲ್ಲು, ತೆಂಗಿನ ಚಿಪ್ಪು ಮುಂತಾದ ಕೃಷಿ ತ್ಯಾಜ್ಯಗಳನ್ನು ಕಲ್ಲಿದ್ದಲಾಗಿ ಪರಿವರ್ತಿಸಿ ತ್ಯಾಜ್ಯ ಸುಡುವಿಕೆ ತಪ್ಪಿಸುತ್ತಿದ್ದಾರೆ. ೨೦೧೮ರಲ್ಲಿ ಮೋಹನ್ ಹಾಗೂ ಸಹಸಂಸ್ಥಾಪಕ ಕೆವಿನ್ ಕುಂಗ್ ಪ್ರಾರಂಭಿಸಿದ ಈ ಉದ್ಯಮ, 4.500 ಕ್ಕೂ ಅಧಿಕ ರೈತರೊಂದಿಗೆ ಕಾರ್ಯನಿರ್ವಹಿಸಿದ್ದು, 3 ಸಾವಿರ ಟನ್ ಕೃಷಿ ತ್ಯಾಜ್ಯ ಪರಿವರ್ತಿಸಿದೆ.
Courtesyg: Google (photo)