ರಾಜಧಾನಿಗೆ ವಿದ್ಯುತ್ ಬಸ್ ಆಗಮನ

ಬಿಎಂಟಿಸಿ ಒಲೆಕ್ಟಾç ಕಂಪನಿಯ ವಿದ್ಯುತ್ ಬಸ್ ಪರೀಕ್ಷಾರ್ಥ ಸಂಚಾರವನ್ನು ನಡೆಸಿದ್ದು, ಈ ಮೂಲಕ ಬೆಂಗಳೂರಿನ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಒಲೆಕ್ಟ್ರಾ ಕಂಪನಿಯ ವಿದ್ಯುತ್ ಬಸ್‌ಗಳು ಹೈದರಾಬಾದ್, ಪುಣೆ-ಮುಂಬೈ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕರ‍್ಯ ನಿರ್ವಹಿಸುತ್ತಿದ್ದು, ಉತ್ತರಾಖಂಡದ ಶಿಲ್ವಾಸ, ಅಸ್ಸಾಂನ ಗುವಾಹಟಿ, ಮಧ್ಯಪ್ರದೇಶದ ಇಂದೋರ್, ಸೂರತ್, ಭೋಪಾಲ್, ಜಬಲ್ಪುರ, ಉಜ್ಜಯಿನಿ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅನುಮತಿ ಪಡೆದುಕೊಂಡಿದೆ. ಇದಕ್ಕಾಗಿ ೮೦೦ ಬಸ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಿರುಮಲ ಮತ್ತು ಶಬರಿಮಲೆ ಬೆಟ್ಟದಲ್ಲೂ ಕಾರ್ಯಾಚರಣೆ ಮಾಡುತ್ತಿದೆ. ಹೈದರಾಬಾದ್‌ನಲ್ಲಿ ಬಸ್ ತಯಾರಿಕೆ ಘಟಕ ಇದೆ ಎಂದು ಒಲೆಕ್ಟಾç ಗ್ರೀನ್‌ಟೆಕ್ ಲಿಮಿಟೆಡ್ ತಿಳಿಸಿದೆ. ಹಿರಿಯ ನಾಗರಿಕರಿಗೆ ಗಾಲಿ ಕುರ್ಚಿ ವ್ಯವಸ್ಥೆ, ಮೊಬೈಲ್/ಯುಎಸ್‌ಬಿ ಚಾರ್ಜಿಂಗ್, ತುರ್ತುಅಲಾರಂ, ನಿಲುಗಡೆ ಬಟನ್, ಪ್ರಥಮ ಚಿಕಿತ್ಸೆ ಕಿಟ್, ಗಾಜು ಒಡೆಯುವ ಸುತ್ತಿಗೆಗಳು, ತುರ್ತು ನಿರ್ಗಮನ ದ್ವಾರ ಒಳಗೊಂಡಿರುವ ಈ ಬಸ್‌ಗಳು ಬ್ಯಾಟರಿ ತಂತ್ರಜ್ಞಾನದ ಹೊರತಾಗಿ ಸಂಪೂರ್ಣ ದೇಶಿ ನಿರ್ಮಿತ. ಪ್ರತಿ ಕಿಮೀಗೆ ೧.೨ ರಿಂದ ೧.೪ ಕೆಡಬ್ಲ್ಯುಎಚ್ ವಿದ್ಯುತ್ ಬಳಕೆಯಾಗಲಿದ್ದು, ಬ್ಯಾಟರಿ ಚಾರ್ಜಿಂಗ್‌ಗೆ ೨- ೩ ಗಂಟೆ ಬೇಕು. ಕೇಂದ್ರ ಸರ್ಕಾರದ ಫೇಮ್-೨ ಯೋಜನೆ ಅಡಿಯಲ್ಲಿ ಪ್ರತಿ ಬಸ್‌ಗೆ ನೀಡುವ ೫೫ ಲಕ್ಷ ಮತ್ತು ರಾಜ್ಯ ಸರ್ಕಾರದ ೩೩ ಲಕ್ಷ ರೂ. ಒಟ್ಟುಗೂಡಿಸಿ, ಪ್ರತಿ ಬಸ್ ಗೆ ೮೮ ಲಕ್ಷ ರೂ. ನೀಡಲಾಗಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top