ರಾಜ್ಯಕ್ಕೆ ಬಂದ 20 ಲಕ್ಷ ಕೋವಿಡ್ ಲಸಿಕೆ ಸಿರಿಂಜ್ಗಳನ್ನು ಎಲ್ಲ ಜಿಲ್ಲೆಗಳಿಗೆ ಕಳಿಸಲಾಗಿದ್ದು, 31 ಲಕ್ಷ ಸಿರಿಂಜು ಸೇರಿದಂತೆ ಹೆಚ್ಚುವರಿ ಉಪಕರಣಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
64 ಬೃಹತ್ ಐಸ್ಲೈನ್ಡ್ ರೆಫ್ರಿಜರೇಟರ್ಗಳು ಬಂದಿದ್ದು, ಲಸಿಕೆ ವಿತರಣೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಲಸಿಕೆ ನೀಡಲು ಸರ್ಕಾರಿ ಕ್ಷೇತ್ರದ 2,73,211 ಹಾಗೂ ಖಾಸಗಿ ಕ್ಷೇತ್ರದ 3,57,313 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಲಸಿಕೆ ನೀಡಲು 9,807 ಸಿಬ್ಬಂದಿ ಹಾಗೂ 28,427 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
Courtesyg: Google (photo)