ರಾಜ್ಯದಲ್ಲಿ ಮತ್ತೆ ಮಳೆ?

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಸಂಭವಿಸುವ ಬುರೇವಿ ಚಂಡಮಾರುತದಿAದ ರಾಜ್ಯದಲ್ಲಿ ಮತ್ತೆ ಮಳೆಯ ಸಾಧ್ಯತೆ ಇದೆ. ಶ್ರೀಲಂಕಾ ಹಾಗೂ ತಮಿಳುನಾಡು ಭಾಗಗಳಲ್ಲಿ ಡಿ. ೨ರಂದು ಬುರೇವಿ ಅಪ್ಪಳಿಸಲಿದೆ. ಆದರೆ, ರಾಜ್ಯದಲ್ಲಿ  ಹೆಚ್ಚು ಪರಿಣಾಮ ಬೀರುವ ಸೂಚನೆಗಳಿಲ್ಲ. ಆದರೆ, ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಚಂಡಮಾರುತ ದುರ್ಬಲವಾಗಿದ್ದರೂ, ತಮಿಳುನಾಡು ಹಾಗೂ ಶ್ರೀಲಂಕಾದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ಚಂಡಮಾರುತ ಡಿ.೨ರಂದು ಶ್ರೀಲಂಕಾದ ಕರಾವಳಿ ದಾಟಲಿದ್ದು,  ತಮಿಳುನಾಡು ಹಾಗೂ ಕೇರಳದ ಕೆಲವೆಡೆ ಹೆಚ್ಚು ಮಳೆಯಾಗಲಿದೆ. ಡಿ.೪ರವರೆಗೆ ಚಂಡಮಾರುತ ಇರಲಿದೆ. ರಾಜ್ಯದ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಡಿ.೩ ಮತ್ತು ೪ರಂದು ಗುಡುಗುಸಹಿತ ಮಳೆಯ ಸಾಧ್ಯತೆಯಿದ್ದು, ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top