ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಡಿಸೆಂಬರ್‌ಗೆ ಮುನ್ನವೇ ರಾಷ್ಟ್ರೀಯ ಉದ್ಯೋಗ ನೀತಿಗೆ ಅಂತಿಮರೂಪ ನೀಡುವ ನಿರೀಕ್ಷೆಇದೆ. ಕೌಶಲ ಅಭಿವೃದ್ಧಿ, ಹೆಚ್ಚು ಉದ್ಯೋಗ ಸೃಷ್ಟಿಸುವ ವಲಯಗಳಲ್ಲಿ ಹೂಡಿಕೆ ಹೆಚ್ಚಳ ಮತ್ತು ನೀತಿ ನಿರೂಪಣೆ ಬದಲಾವಣೆ ಇತ್ಯಾದಿ ಮೂಲಕ ಉದ್ಯೋಗಾವಕಾಶ ಹೆಚ್ಚಳ ಎನ್‌ಇಪಿ ಗುರಿ. ಸಂಸತ್ತು ಕಳೆದ ವರ್ಷ ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ, ಕೆಲಸದ ಸ್ಥಳದಲ್ಲಿ ಆರೋಗ್ಯ ರಕ್ಷಣೆ ಮತ್ತು ಕೆಲಸದ ಸ್ಥಿತಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಅನುಮೋದಿಸಿದೆ. ವೇತನ ಸಂಹಿತೆ ಕೂಡ ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ.
ಇವೆಲ್ಲವೂ ಏ.೧ರಿಂದ ಜಾರಿಗೆ ಬರುವ ನಿರೀಕ್ಷೆಇದೆ. ದೇಶದಲ್ಲಿ ೫೦ ಕೋಟಿಗಿಂತ ಹೆಚ್ಚು ಸಂಖ್ಯೆಯಲ್ಲಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಇನ್ನಿತರ ಸುರಕ್ಷತೆಯನ್ನು ಇವು ಒದಗಿಸಲಿವೆ. ಕಾರ್ಮಿಕ ಬ್ಯೂರೋ ನಾಲ್ಕು ಸಮೀಕ್ಷೆ ನಡೆಸಲಿದ್ದು, ಅದರ ಅಂಶಗಳನ್ನು ಆಧರಿಸಿ ಎನ್‌ಇಪಿ ಅಂತಿಮ ರೂಪ ಪಡೆದುಕೊಳ್ಳಲಿದೆ ಎಂದು ಬ್ಯೂರೊ ಮಹಾನಿರ್ದೇಶಕ ಡಿ.ಎಸ್. ನೇಗಿ ತಿಳಿಸಿದರು.
Courtesyg: Google (photo)