ಲಾಕ್‌ಡೌನ್ ಸಂದರ್ಭದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಿದ್ದ ರಿಟೇಲ್ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಈ ವಲಯದ ಪ್ರಮುಖ ಕಂಪನಿಗಳು ಹೇಳುತ್ತಿವೆ. ಲಾಕ್‌ಡೌನ್ ಬಳಿಕ ಎರಡು ತಿಂಗಳು ರೆಸ್ಟೋರೆಂಟ್ ಮುಚ್ಚಬೇಕಾಯಿತು. ವಹಿವಾಟು ನಡೆಸಲು ಸ್ವಿಗ್ಗಿಯನ್ನೇ ಅವಲಂಬಿಸಬೇಕಾಯಿತು. ಲಾಕ್‌ಡೌನ್‌ನಿಂದ ಅನಿವರ‍್ಯವಾಗಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಯಿತು. ಆಗಸ್ಟ್ನಿಂದ ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕುಟುಂಬಗಳು ರೆಸ್ಟೋರೆಂಟ್‌ಗೆ ಬರುತ್ತಿವೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳಿದರು.
ಕಳೆದ ವರ್ಷ ಕೂಡ ರಿಟೇಲ್ ವಹಿವಾಟು ಅಷ್ಟೇನೂ ಉತ್ತಮವಾಗಿರಲಿಲ್ಲ. ಕೋವಿಡ್‌ನಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಯಿತು. ಲಾಕ್‌ಡೌನ್ ಸಡಿಲಿಕೆ ಬಳಿಕ ಶೇ.೬೦-೬೫ರಷ್ಟು ಮಾರಾಟ ನಡೆಯುತ್ತಿದೆ ಎಂದು ಪ್ರೆಸ್ಟೀಜ್ ರಿಟೇಲ್‌ನ ಸಿಬ್ಬಂದಿಯೊಬ್ಬರು ತಿಳಿಸಿದರು. ಲಾಕ್‌ಡೌನ್‌ಗೆ ಮೊದಲೇ ನಮ್ಮ ಮಳಿಗೆಗಳನ್ನು ಮುಚ್ಚಲಾಯಿತು. ಇಂಥ ಸಂದಿಗ್ಧ ಸಮಯದಲ್ಲಿ ಜನರು ಡಿಜಿಟಲ್ ಮಾರ್ಗ ಕಂಡುಕೊಂಡಿದ್ದು ಶ್ಲಾಘನೀಯ. ನಿರ್ಬಂಧ ಸಡಿಲಿಕೆ ಬಳಿಕ ಆನ್‌ಲೈನ್ ಮೂಲಕ ಬೇಡಿಕೆ ಹೆಚ್ಚತೊಡಗಿತು ಎಂದು ರಿಟೇಲ್ ಪೀಠೋಪಕರಣ ಕಂಪನಿ ಐಕಿಯಾದ ವ್ಯವಸ್ಥಾಪಕ ನಿರ್ದೇಶಕ ಪೀಟರ್ ಜರ್ಗನ್ ತಿಳಿಸಿದರು.
Courtesyg: Google (photo)